*ಹೌದು ನಾನು ಬದಲಾಗಿದ್ದೇನೆ
ನನ್ನ ಬದುಕಿನಲ್ಲಿ ಬಂದ ಎಲ್ಲರನ್ನೂ ಪ್ರೀತಿಸಿದ ಅವಧಿ ಮುಗಿದಾಯ್ತು. ಈಗ ನನ್ನನ್ನು ಪ್ರೀತಿಸುವ ಸರತಿ ಬಂದಿದೆ
*ಹೌದು ಬದಲಾಗಿದ್ದೇನೆ
ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ..ನನಗೂ ಮಿತಿಯಿದೆ..!
*ಹೌದು ಬದಲಾಗಿದ್ದೇನೆ
ತರಕಾರಿ, ಹಣ್ಣುಗಳನ್ನು ಚೌಕಾಸಿ ಮಾಡಿ ಕೊಳ್ಳುವುದನ್ನು ನಿಲ್ಲಿಸಿದ್ದೇನೆ. ಅದರಿಂದ ನನ್ನ ಕಿಸಿಯೇನು ಬರಿದಾಗುವುದಿಲ್ಲ! ಒಬ್ಬ ಬಡವ್ಯಾಪಾರಿಯ ಮಗಳ ಶಾಲಾ ಫೀಸ್ ತುಂಬಲು ಸಹಾಯವಾಗಬಹುದು..!
*ಹೌದು ಬದಲಾಗಿದ್ದೇನೆ
ಒಬ್ಬ ಟ್ಯಾಕ್ಸಿ ಚಾಲಕನ ಹತ್ತಿರ ಚಿಲ್ಲರೆ ಕೇಳುವುದನ್ನು ನಿಲ್ಲಿಸಿದ್ದೇನೆ. ಅವನ ಬದುಕು ನನಗಿಂತ ಸಂಕಷ್ಟದಲ್ಲಿರಬಹುದು..!
*ಹೌದು ಬದಲಾಗಿದ್ದೇನೆ
ಇತರರು ತಪ್ಪು ಮಾಡಬಹುದು. ಹಾಗೆಂದ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ. ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ. ನೆಮ್ಮದಿಯೆಂದರೆ ಪರಿಪೂರ್ಣತೆಗೂ ಮಿಗಿಲು..!
*ಹೌದು ಬದಲಾಗಿದ್ದೇನೆ
ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಾಹವನ್ನು ಪುಷ್ಠಿಗೊಳಿಸುತ್ತಿದೆ..!
*ಹೌದು ಬದಲಾಗಿದ್ದೇನೆ
ನನ್ನ ಅಂಗಿ ಚೂರು ಹರಿದಿದ್ದರೆ ಅಥವಾ ಕಲೆಯಾಗಿದ್ದರೆ ಅದರ ಬಗ್ಗೆ ತಲೆ ಕೆಡಸಿಕೊಳ್ಳುತ್ತಿಲ್ಲ. ಅದೇನೆ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು..!
*ಹೌದು ಬದಲಾಗಿದ್ದೇನೆ
ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದುಬಿಡುತ್ತೇನೆ. ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಇರಬೇಕು ಅಲ್ಲವೇ??
*ಹೌದು ಬದಲಾಗಿದ್ದೇನೆ
ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ. ಅವರೇ ಮುಂದೆ ಹೋಗಲಿ. ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ಧಿಯಲ್ಲ..!
*ಹೌದು ಬದಲಾಗಿದ್ದೇನೆ
ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯನೆನ್ನಿಸಿಕೊಂಡಿರುವುದು!
*ಹೌದು ನಾನು ಬದಲಾಗಿದ್ದೇನೆ
ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಅಹಂಕಾರ ದೊಡ್ಡದೇನಲ್ಲ!?
*ಹೌದು ಬದಲಾಗಿದ್ದೇನೆ
ಈ ಕ್ಷಣದಲ್ಲಿ ಬದುಕುವುದು ಕಲಿತಿದ್ದೇನೆ. ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಿರಬಹುದು!??
*ಹೌದು ಬದಲಾಗಿದ್ದೇನೆ
ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ. ಇದು ನನ್ನ ಸಂತೋಷದ ಸರದಿ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ. ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ, ನನಗೆ ನಾನು ನ್ಯಾಯ ಒದಗಿಸುವುದು ಎಂದರ್ಥ...!!
-ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
