#96
10 ಸಲ ನೋಡಿದ್ರೂ ಮೊದಲನೇ ಸಲ ನೋಡಿದಂತೇ feelu....ಈ ನೇ ಬಾರಿ ನೋಡಿದಮೇಲೆ ನನ್ನ ಕೈಗಳು ನನ್ನ ಮಾತನ್ನು ಕೇಳಲಿಲ್ಲ
One of the GREATEST
LOVE STORIES I HAVE EVER SEEN ON BIG SCREEN...
ಸಿನೆಮಾ ನೋಡಿದ್ಮೇಲೆ ಒಂದ್ ಹತ್ತು ವರ್ಷ ವಯಸ್ಸು ಕಡಿಮೆ ಆದಂಗ್ feel ಆಯ್ತು…ಒಳ್ಳೇ ಸಿನೆಮಾಗಳು ಥಿಯೇಟರಿಂದ ಆಚೆ ಬಂದು ಮನೆತನಕ ಅಥವ ಒಂದೆರಡು ದಿನ ಮನಸ್ಸಲ್ಲಿ ಉಳಿಯುತ್ತವೆ.. ಅದ್ಭುತ ಸಿನೆಮಾಗಳು ಬಹಳ ಕಾಲ, ಕೆಲವೊಂದಷ್ಟು ಸಿನೆಮಾಗಳು ಜೀವಿತಾವಧಿ ಪೂರ್ತಿ ಮನಸ್ಸಲ್ಲಿ ಉಳಿಯುತ್ತವೆ.. ಆ ರೀತಿ ಬಹಳ ಕಾಲ ಮನಸಲ್ಲಿ ಉಳಿಯೋ ಸಿನೆಮಾ '96. VijaySethupathi and Trisha ಇಬ್ರೂ ಕಾಂಪಿಟೇಷನ್ನಿಗೆ ಬಿದ್ದಂಗೆ ಪಾತ್ರಗಳಲ್ಲಿ ಜೀವಿಸಿದ್ದಾರೆ.
96 ಸಿನೆಮಾದ "ರಾಮ್" ಪಾತ್ರ ನಾನು ಅರ್ಥ ಮಾಡ್ಕೊಂಡಂತೆ - "ಆತ ಪ್ರೀತಿಯಲ್ಲಿ ಸೋತ ಏಕಾಂಗಿಯಲ್ಲ.. ತನ್ನೊಳಗೆ ಒಂದು ಶಾಶ್ವತ ಪ್ರೀತಿಯನ್ನು ಉಸಿರಾಡಿಸಿಕೊಂಡು ತನ್ನ ಏಕಾಂಗಿತನವನ್ನು ಆಸ್ವಾದಿಸುತ್ತಾ ಬದುಕುವವ..." ಆತನಲ್ಲಿ ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡ ನೋವಿಲ್ಲ, ಆ ಪ್ರೀತಿಯ ನೆನಪುಗಳೇ ಅವನಿಗೆ ಚೈತನ್ಯ ನೀಡುವ ಶಕ್ತಿಯಂತೆ ಭಾವಿಸಿಕೊಂಡು ಬದುಕಿದ ಪಾತ್ರ ಅದು.. ಕಾಲದ ಜೊತೆಗೆ ಕಾಲು ಹಾಕುತ್ತ ಪ್ರಕೃತಿಯಲ್ಲಿ ತನ್ನ ತಾನು ಕಳೆದುಕೊಂಡು ಶುದ್ಧ ಜೀವನ ಪ್ರೀತಿ ಮತ್ತು ಜೀವನೋತ್ಸಾಹ ತುಂಬಿಕೊಂಡ ಪಾತ್ರ... ಬಂದದ್ದನ್ನೆಲ್ಲಾ ಬಂದಂತೆ ಸ್ವೀಕರಿಸಿಕೊಂಡು ತನ್ನ ನೆನಪಿನ ಬುತ್ತಿಗೆ ತುಂಬಿಕೊಳ್ಳುವ ರಾಮ್
ಹೀರೋ, ವಿಲ್ಲನ್, ಪೋಷಕನಟ, ಆಕ್ಷನ್ ಹೀರೋ, ಕಾಮೆಡಿ, ಕ್ಲಾಸು, ಮಾಸು, ಇತ್ಯಾದಿ., ಯಾವುದೇ ಇಮೇಜಿಗೆ ಸೀಮಿತವಾಗದೇ ಸಿನೆಮಾದೊಳಗೂ ಮತ್ತು ನಮ್ಮ ಮನದೊಳಗೂ ದಿನೇ ದಿನೇ ಗಟ್ಟಿಯಾಗಿ ಬೇರೂರುತ್ತ ಹೆಮ್ಮರವಾಗಿ ಬೆಳೆಯುತ್ತಿರುವ ಅದ್ಭುತ ನಟಮತ್ತು ವ್ಯಕ್ತಿತ್ವ.. ಪ್ರತಿದಿನ ಒಮ್ಮೆಯಾದರೂ ಮನಪಟಲದಲ್ಲಿ ಮಿಂಚುವ ಹೆಸರು, ವ್ಯಕ್ತಿ ಮತ್ತು ವ್ಯಕ್ತಿತ್ವ.. ವಿಜಯ್ ಸೇತುಪತಿ.. 
ಯಾರ್ ಯಾರೆಲ್ಲಾ 90's ನಲ್ಲಿ ಹೈಸ್ಕೂಲ್ ಓದಿದಾರೋ ಅವರೆಲ್ಲಾರ ಎದೆಯೊಳಗಿನ ಭಾವಗೀತೆಯೇ '96 ಸಿನೆಮಾ...!💖
