ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ: ಸತ್ಯ! ದೇಶದಲ್ಲಿ ಕೂತರೂ, ನಿಂತರೂ, ನಡೆದಾಡಿದ್ರೂ, ಉಸಿರಾಡಿದ್ರೂ ಜನ ತೆರಿಗೆ ಕಟ್ಟಿ ಸಾಯೋ ಸ್ಥಿತಿ ಇದೆ. ಉದಾಹರಣೆಯೊಂದಿಗೆ ಇದನ್ನು ನೋಡಿ.
ನೀವು ತಿಂಗಳ ಸಂಬಳಕ್ಕೆ ಕೆಲಸ ಮಾಡುವ ಸಾಮಾನ್ಯ ಒಬ್ಬ ಉದ್ಯೋಗಿ ಅಂತ ಅಂದುಕೊಳ್ಳಿ, ನಿಮಗೆ ನಿಮ್ಮ ತಿಂಗಳ ಸಂಬಳ ಕೈಸೇರುವ ಮುನ್ನವೇ TDS ಹೆಸರಿನಲ್ಲಿ TAX ಕಟ್ ಆಗಿ ಇರುತ್ತೆ, ಜೊತೆಗೊಂದು ಪ್ರೊಫೆಷನಲ್ ಟ್ಯಾಕ್ಸ್ ತಿಂಗಳಿಗೆ 200. ಇದರ ಮೇಲೆ ನೀವು ವರ್ಷ ಪೂರ್ತಿ ಕಟ್ಟಿದ ತೆರಿಗೆಯ ಮೇಲೆ ಮತ್ತೆ 4% Cess! ಆಯ್ತು ನೀವು ತಿಂಗಳಿಗೆ 7, 8 ಸಾವಿರ TDS ಪಾವತಿಸುವ ಉದ್ಯೋಗಿ ಅಂತ ಅನ್ಕೊಳ್ಳಿ, ನೀವು ಕಟ್ಟುವ ತೆರಿಗೆಗೆ ಪ್ರತಿಯಾಗಿ ನಿಮಗೆ ಸರ್ಕಾರದಿಂದ ವಾಪಸ್ ಸಿಗುತ್ತಿರೋದು ಏನು? ಪ್ರಾಮಾಣಿಕವಾಗಿ ದುಡಿದು ತೆರಿಗೆ ಕಟ್ಟುತ್ತಾನೆ ಅನ್ನೋ ಕಾರಣಕ್ಕೆ ಅಟ್ಲೀಸ್ಟ್ ವೈದ್ಯಕೀಯ ಸವಲತ್ತು ಆದರೂ ಉಚಿತವಾಗಿ ಸಿಗುತ್ತಾ? ಹೋಗ್ಲಿ, ನನ್ನ ವೈದ್ಯಕೀಯ ವೆಚ್ಛ ನಾನೇ ನೋಡಿಕೊಳ್ತೀನಿ ಅಂತ ನೀವು ಭಾವಿಸಿ, ಹೆಲ್ತ್ ಇನ್ಯೂರೆನ್ಸ್ ಮಾಡಿಸಿದ್ರೆ ಆ ಹೆಲ್ತ್ ಇನ್ಯೂರೆನ್ಸ್ ಮೇಲೆ 18% GST! ತೆರಿಗೆ ಕಟ್ಟುವ ಉದ್ಯೋಗಿಗೆ ಕನಿಷ್ಠ ವೈದ್ಯಕೀಯ ವ್ಯವಸ್ಥೆ ಕಲ್ಪಿಸಲು ಯೋಗ್ಯತೆ ಇಲ್ಲದ ಸರ್ಕಾರ, ಆತ ಸ್ವಂತ ದುಡಿಮೆಯಿಂದ ಖರೀದಿಸುವ ಹೆಲ್ತ್ ಇನ್ಯೂರೆನ್ಸ್ ಮೇಲೆ TAX ಹಾಕುತ್ತೆ. ಇನ್ನು ಆ ಹೆಲ್ತ್ ಇನ್ಯೂರೆನ್ಸ್ ಏನಾದರೂ ಕ್ಲೈಮ್ ಬಂದರೆ ಅದರ ನಿಯಮಗಳಾದರೂ ಜನರಿಗೆ ಅನುಕೂಲವಾಗೋ ರೀತಿ ಇದ್ಯಾ ಅಂತ ಕೇಳಿದ್ರೇ ಅದು ಇಲ್ಲ, ಇನ್ಯೂರೆನ್ಸ್ ಕಂಪನಿಗಳಿಗೆ ಅನುಕೂಲವಾಗೋ ತರ ನಿಯಮಗಳಿವೆ. ನಿಮ್ಮ ಇನ್ಶೂರೆನ್ಸ್ ಕಂಪನಿ ಸಿಲ್ಲಿ ಕಾರಣಗಳನ್ನು ಕೊಟ್ಟು ನಿಮ್ಮ ಕ್ಲೈಮ್ ರಿಜೆಕ್ಟ್ ಮಾಡಬಹುದು. ಈ ಸರ್ಕಸ್ ಮಧ್ಯೆ ನೀವು ಕಷ್ಟ ಪಟ್ಟು ಉಳಿತಾಯ ಮಾಡಿ ಒಂದು ಕಾರು ಖರೀದಿ ಮಾಡಿದ್ರಿ ಅಂತ ಅನ್ಕೊಳ್ಳಿ, ಕಾರು ಖರೀದಿ ಮಾಡೋವಾಗ ಆ ಕಾರಿಗೆ ಲೈಫ್ ಟೈಮ್ ತೆರಿಗೆ ಪಾವತಿಸುತ್ತೀರಿ, ಕಾರಿಗೆ ಹಾಕೋ ಪಟ್ರೋಲ್ ಮೇಲೆ ಕೇಂದ್ರ ಹಾಗೂ ರಾಜ್ಯದ ವಿಪರೀತ ತೆರಿಗೆ ಇದೆ ಜೊತೆಗೆ ಒಂದು ಲೀಟರ್ ಪೆಟ್ರೋಲ್ನಲ್ಲಿ ಹತ್ತಿರ ಹತ್ತಿರ 10 ರೂಪಾಯಿ ನೀವು ರೋಡ್ cess ಅಂತ ಕಟ್ಟುತ್ತೀರಿ, ಇಷ್ಟೆಲ್ಲಾ ತೆರಿಗೆ ಕೊಟ್ಟು, ಕಾರನ್ನು ರಸ್ತೆಗೆ ತಂದ್ರೆ ರಸ್ತೆಯ ಅಲ್ಲಲ್ಲಿ ಟೋಲ್ಗೇಟ್ಗಳು. ಇನ್ನೂ ರಸ್ತೆಯಾದ್ರೂ ಸರಿ ಇದ್ಯಾ ಅಂದ್ರೆ ಅದೂ ಇಲ್ಲ, ದರಿದ್ರ ರೋಡಿನಲ್ಲಿ ಓಡಾಡಿ, ಕಾರು ರಿಪೇರಿಗೆ ಬಂದ್ರೆ ಆ ರಿಪೇರಿಯ ಖರ್ಚಿನ ಮೇಲೆ ಮತ್ತೆ ಜಿಎಸ್ಟಿ!
ಈ ಸರ್ಕಸ್ ಮಧ್ಯೆ ಅಲ್ಪಸ್ವಲ್ಪ ಉಳಿಸಿದ ದುಡ್ಡನ್ನು ಶೇರ್ ಮಾರ್ಕೆಟ್ಗೆ ಹಾಕಿದ್ರಿ ಅಂತ ಅನ್ನೊಳ್ಳಿ, ಅಲ್ಲಿ ನಿಮಗೆ ಏನಾದರೂ ಲಾಭ ಬಂದ್ರೆ ಅಲ್ಲೂ ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಅಂತ TAX ಇದೆ, ಅದನ್ನು ನಿರ್ಮಲಾ ಮೇಡಂ ಕಳೆದ ಬಜೆಟ್ನಲ್ಲಿ ಹೆಚ್ಚಿಸಿದ್ದಾರೆ. ಶೇರ್ ಮಾರ್ಕೆಟ್ನಲ್ಲಿ ಲಾಸ್ ಆದರೆ ಸರ್ಕಾರ ನಿಮ್ಮ ಸಹಾಯಕ್ಕೆ ನಿಲ್ಲಲ್ಲ, ಅಲ್ಲಿ ಲಾಭ ಬಂದ್ರೆ ಸರ್ಕಾರ ನಿಮ್ಮಿಂದ ತೆರಿಗೆಯ ರೂಪದಲ್ಲಿ ಪಾಲು ಪಡೆಯುತ್ತೆ! ಇದರ ಮಧ್ಯೆ ದಿನಬಳಕೆಗೆ ನಾವು ಖರೀದಿಸುವ ಹೆಚ್ಚಿನ ಎಲ್ಲಾ ವಸ್ತುಗಳ ಮೇಲೆ GST ಕಟ್ಟಲೇ ಬೇಕು! ಆದಾಯ ಕೈ ಸೇರುವ ಮುನ್ನವೇ ಡೈರೆಕ್ಟ್ ಟ್ಯಾಕ್ಸ್ ಕಟ್ಟಿ, ಉಳಿದ ದುಡ್ಡನ್ನು ಖರ್ಚು ಮಾಡಿದ್ರೆ ಅದಕ್ಕೆ ಇನ್ಡೈರೆಕ್ಟ್ ಟ್ಯಾಕ್ಸ್! ಇಷ್ಟೆಲ್ಲಾ ಟ್ಯಾಕ್ಸ್ ಕಟ್ಟಿದ ಒಬ್ಬ ಸಾಮಾನ್ಯ ಮನುಷ್ಯನಿಗೆ ಸಿಗ್ತಾ ಇರೋದು ಏನು? ಜನ ಬದುಕಬೇಕಾ? ಸಾಯ್ಬೇಕಾ?
- ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
.jpeg)
No comments:
Post a Comment