Wednesday, April 24, 2019

#ಬಾಲ್ಯವನ್ನು_ಜೀವಂತವಾಗಿರಿಸಿದ_ಆಟಗಾರ

ಆವಾಗ ದೇವರು ಕೂಡ ಕ್ರಿಕೆಟ್ ಆಡ್ತಾ ಇದ್ದ...! ಅವರ  ಕ್ರಿಕೆಟ್ ಆಟ ನೋಡು ನೋಡುತ್ತಲೆ ಬೆಳೆದವರು ನಾವೂ. ಆ ಕ್ರಿಕೆಟ್ರ  ಹೆಸರು ಸಚಿನ್ ರಮೇಶ್ ತೆಂಡುಲ್ಕರ್. ನಮ್ಮಲ್ಲಿನ ಪುಟ್ಟ ಪುಟ್ಟ ರಸ್ತೆಗಳಲ್ಲಿ, ಗದ್ದೆಗಳಲ್ಲಿ, ಮನೆಯ ಬಾಗಿಲ ಪುಟ್ಟ ಅಂಗಣದಲ್ಲಿ ಮರದ ತುಂಡಲ್ಲಿ , ತೆಂಗಿನ ಮರದ ಕೊತ್ತಲಿಗೆಯಲ್ಲಿ ಬ್ಯಾಟ್ ಕೆತ್ತಿ ಕ್ರಿಕೆಟ್‌ ಆಡಲಿಕ್ಕೆ ಹುಚ್ಚು ಹಚ್ಚಿಸಿದ್ದೆ ಆ ಆಟಗಾರ . ಬಹುಪಾಲು ಶಾಲಾ ನೋಟ್ ಬುಕ್ಕಿನ ಪುಟಗಳ ನಡುವೆ ಅಲ್ಲಲ್ಲಿ ನ್ಯೂಸ್ ಪೇಪರ್ ನಲ್ಲಿರುತ್ತಿದ್ದ ಸಚಿನ್ ನ ಚಿತ್ರ ಚಿತ್ತಾರದ ಕಟ್ಟಿಂಗ್ಸ್ ಗಳು. ನಾನು ಹೈಸ್ಕೂಲಿನ ದಿನಗಳಲ್ಲಿ ಶಾಲೆಗೆ ಚಕ್ಕರ್ ಹಾಕಿದ್ದರೆ ಅದಕ್ಕೆ ಬಹುಪಾಲು ಸಚಿನ್ , ಗಂಗೂಲಿ, ದ್ರಾವಿಡ್ರೆ ಕಾರಣ. ಬಹುಶಃ ಅದು 1998ರ ಸಮಯ, ಸಚಿನ್ ಶಾರ್ಜಾದಲ್ಲಿ ಕಾಂಗರೂಗಳ ಬಾರಿಸಿದ ಶತಕಗಳ ಮರೆಯಾಲಾಗದು. ಅಖ್ತರ್, ಅಕ್ರಂ, ಯೂನಸ್ ರಂಥವರ ದಾಳಿಯೆ ದಂಗಾಗುವಂತೆ ವಿಶ್ವಕಪ್ ಪಂದ್ಯದಲ್ಲಿ ಬಾರಿಸಿದ ಆ 98ರನ್ ಗಳು ಎಲ್ಲಾ ಶತಕಗಳಿಗಿಂತಲು ಇಷ್ಟವಾಗಿದ್ದು. ಚೆನೈ ನಲ್ಲಿ ಪಾಕಿಸ್ತಾನ ವಿರುದ್ದ ಟೆಸ್ಟ್‌ ನಲ್ಲಿ ನೋವಿನ ನಡುವೆಯೂ ಸಚಿನ್ ತೋರಿದ ಕೆಚ್ಚದೆಯ ಆಟವನ್ನು ರೇಡಿಯೊ ದ ಕಾಮೆಂಟ್ರಿಯಲ್ಲಿ ಢವಗುಡುವ ಹೃದಯದ ಬಡಿತದೊಂದಿಗೆ ನೋಡಿದ್ದು ಇವತ್ತಿಗು ನೆನಪಿದೆ. 90 ರ ನಂತರದ ಎರಡು ದಶಕಗಳಲ್ಲಿ ನಮ್ಮನ್ನು ಮನರಂಜಿಸಿದ ಕ್ರಿಕೆಟ್ ದಂತಕಥೆ  ಸಚಿನ್ ತೆಂಡುಲ್ಕರ್ ನ ಜನ್ಮ ದಿನ.


#Happy Birthday Sachin Tendulkar😍

Saturday, April 13, 2019

#ಹಕ್ಕಿ ಗೂಡು ಮರೆತು ಹಾರಿದಾಗ..!!



              ವಲಸೆ ಹಕ್ಕಿ ಸಮಯ ಬಂದಾಗ ತನ್ನ ಪಾಡಿಗೆ ತಾನು ಹಾರಿ ಹೋಗುತ್ತದೆ... ಆದರೆ  ಹಕ್ಕಿಯ ಗೂಡು ಮಾತ್ರ ಮತ್ತೆಂದಾದರೂ ಹಕ್ಕಿ ಮರಳುವುದೆಂಬ ಆಸೆಯಲ್ಲಿ ಕಾಯುತ್ತದೆ...!
ಹಾರಲಾಗದ್ದೆಲ್ಲಾ ನಿರ್ಜೀವವಲ್ಲ... ಹಕ್ಕಿಯೇ ಶ್ರದ್ಧೆಯಿಂದ ಕಟ್ಟಿದ ಗೂಡದು, ಬೇಕಾದಾಗ ಬೆಚ್ಚನೆಯ ಮನೆಯಾಗಿತ್ತು... ಹಕ್ಕಿಗೆ ಎಷ್ಟು ಗೂಡೋ? ಆದರೆ ಗೂಡಿಗೆ ಅದೊಂದೇ ಹಕ್ಕಿ...!
ಹಕ್ಕಿಯೇ ಕಟ್ಟಿದ್ದು ಗೂಡನ್ನ!
ಹೌದು, ಹಕ್ಕಿಯೇ ಕಟ್ಟಿದ್ದು ಗೂಡನ್ನ! ಮತ್ತೆ ಬರೋದಿಲ್ಲ ಅಂತ ಗೊತ್ತಿದ್ಮೇಲೆ ಕಟ್ಬೇಕು ಯಾಕೆ?
ಹಕ್ಕಿಗೆ ಬಯಲಲ್ಲಿ ಮಲಗಲಾಗದು! ಮನೆ ಬೇಕು, ಅದರ ಶ್ರಮ, ಅದರ ಆಸಕ್ತಿ, ಗೂಡು ಕಟ್ಟಿತು.
ಬಯಲಲ್ಲಿ ಮಲಗಲಾಗದಿದ್ದ ಮೇಲೂ ಬಯಲಿನ ಮೋಹ ಹಕ್ಕಿಯನ್ನು ಬಿಡಲಿಲ್ಲ... ಈಗೇನೋ ಇರುವುದೆಲ್ಲವ ಬಿಟ್ಟು ಹಾರಿಹೋಗಿದೆ ಹಕ್ಕಿ, ಎಷ್ಟಂದರೂ ವಲಸೆ ಹಕ್ಕಿ, ಮರಳಿ ಬಂದೀತು ಒಂದು ದಿನ, ಆಗ ಗೂಡಿರದು, ಮತ್ತೆ ಹೊಸ ಗೂಡು ಕಟ್ಟುವ ಸಂಭ್ರಮದ ಹಕ್ಕಿಗೆ ಗೂಡಿನ ನೆನಪೂ ಇದು....!💯

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...