Thursday, March 12, 2020

#ದಿಯಾ..❤

Life is Full of surprises & Miracles
ಸಿನಿಮಾ ಅಂದ್ಮೇಲೆ ಒಂದು ಮನೋರಂಜನೆ ಕೊಡ್ಬೇಕು ಅಥ್ವಾ ಮನಸನ್ನ ಕೆದಕಿ ಸ್ವಲ್ಪ ದಿನ ಕಾಡ್ಬೇಕು, ಮಲಯಾಳಂ ನ ಪ್ರೇಮಂ,
ಮರಾಠಿಯ ಸೈರಾಟ್, ತಮಿಳಿನ 96' ಸಿನಿಮಾಗಳ ನಂತರ ಅತಿ ಹೆಚ್ಚು ಕಾಡಿದ ಸಿನಿಮಾ ದಿಯಾ ಅದು ಕೂಡ ಕನ್ನಡದ ಸಿನಿಮಾ
ಆಗಿರೋದ್ರಿಂದ ಸ್ವಲ್ಪ ಜಾಸ್ತಿ ಖುಷಿ ಆಗ್ತಿದೆ...
ಕಥೆ, ಸಂಕಲನ ವ್ಯವಕಲನ, ನಟನೆ ಅದು ಇದು ಅಂತ ಬರ್ಯೋಕೆ ಹೋಗಲ್ಲ ಆದ್ರೆ ಕೆಲವು ವಿಷಯಗಳನ್ನ ಹೇಳ್ಬೇಕು ಅದನ್ ಮಾತ್ರ
ಹೇಳ್ತೀನಿ, ಮೊದಲನೆಯದಾಗಿ ಎಲ್ಲರಂತೆ ನಂದು ಸೇಮ್ ಡೈಲಾಗ್ ಈ ಸಿನಿಮಾವನ್ನ ಥಿಯೇಟರಿನಲ್ಲಿ ನೋಡದೆ Laptop ಆಲ್ಲಿ
ನೋಡಿದ್ಕೆ ಬೇಸರ ಇದೆ, 
ದಿಯಾ ನೋಡೋಕೆ ಶುರು ಮಾಡಿದಾಗ ಬಿಳಿ ಹಾಳೆಯಂತೆ ಇದ್ದ ಹೃದಯ ಸಿನಿಮಾ ಮುಗುದ್ಮೇಲೆ ಭಾವನೆಗಳ ಬಣ್ಣಗಳನ್ನ ಹಚ್ಚಿಕೊಳ್ಳುತ್ತೆ,
ಒಂದೊಂದು ದೃಶ್ಯ ಕಾಡ್ತಾ ಹೋಗುತ್ತೆ, ಸಿನಿಮಾದಲ್ಲಿ ಎಲ್ಲರದ್ದು ಅದ್ಭುತ ಪಾತ್ರ ಆದ್ರೆ ಆ ಹೀರೋಯಿನ್ ಸಿನಿಮಾ ಪೂರ್ತಿ ಹೇಗೆ
ಪಾತ್ರಕ್ಕೆ ಜೀವ ತುಂಬಿದ್ದಾಳೆ ಅಂದ್ರೆ ನಿರ್ದೇಶಕ ಅವಳನ್ನ ನೋಡಿದ್ ನಂತರವೇ ಕಥೆ ಬರುದ್ನ ಅಂತ ಅನ್ಸುತ್ತೆ, ಆ ಮೂರು ಪ್ರಮುಖ
ಪಾತ್ರಗಳನ್ನ ನೋಡ್ದಾಗ ಪ್ರತಿಯೊಬ್ಬರಿಗೂ ಅನ್ಸುತ್ತೆ ನನ್ ಲೈಫಲ್ಲೂ ಈ ಥರ ಸಂದರ್ಭ ಬಂದಿತ್ತಲ್ಲ ಅಂತ,
ಬಿಲ್ಡಪ್ ಎಂಟ್ರಿ ಇಲ್ಲ, ಬಿಲ್ಡಪ್ ಸಾಂಗ್ಸ್ ಇಲ್ಲ, ಐಟೆಮ್ ಸಾಂಗ್ ರೊಮ್ಯಾಂಟಿಕ್ ಸಾಂಗ್ಸ್ ಇಲ್ಲ, ಫೈಟ್ ಇಲ್ಲ ಕಾಮಿಡಿ ಇಲ್ಲ, ಪ್ರಮುಖವಾಗಿ
ಡಬಲ್ ಮೀನಿಂಗ್ ಡೈಲಾಗ್ ಇಲ್ಲ, ಜಸ್ಟ್ ವಾವ್ ಅಷ್ಟೇ,
ಮೊದಲ ನೋಟದಲ್ಲೇ ಆಗೋ ಪ್ರೀತಿ ಅದನ್ ಹೇಳೋಕೆ ಆಗುವಂತ ಮುಜುಗರ ತಾನ್ ಇಷ್ಟ ಪಡ್ತಿದ್ದವರು ತನ್ನನ್ನು ಇಷ್ಟ ಪಡ್ತಿದ್ರು
ಅಂತ ಗೊತ್ತಾದಾಗ ಆಗುವ ಆನಂದ, ಹುಡ್ಗ ಹುಡ್ಗಿ ನಡುವೆ ಗಾಢವಾದ ಸ್ನೇಹ ಇರೋದಿಲ್ಲ ಅದು ಯಾವತ್ತಿದ್ರು ಪ್ರೀತಿಯಾಗಿ ಕನ್ವರ್ಟ್
ಆಗುತ್ತೆ ಅಂತ ಹೇಳಿರೊದು ಸಾಲದ್ದಕ್ಕೆ ತಾಯಿ ಮಗನ ನಡುವಿನ ಪ್ರೀತಿ ವಾತ್ಸಲ್ಯವನ್ನ ತೆರೆ ಮೇಲೆ ತೋರ್ಸಿರೊ ರೀತಿ ನಿಜಕ್ಕೂ
ಒಂದಕ್ಕಿಂಥ ಒಂದು ಅದ್ಭುತ ಬಿಡಿ...
ಒಂದೊಳ್ಳೆಯ ಕಾಫಿ ಕುಡಿದ ಮೇಲೆ ಸ್ವಲ್ಪ ಹೊತ್ತು ಬೇರೆನೂ ಕುಡಿಯುವುದು ಬೇಡ ಅಂತ ಅನ್ನಿಸಿಬಿಡುತ್ತೆ. ಕಾರಣ ಇಷ್ಟೇ, ಆ ಕಾಫಿ
ಯ ಸ್ವಾದ ಇನ್ನೂ ಸ್ವಲ್ಪ ಹೊತ್ತು ನಾಲಗೇಲಿ ಹಾಗೇ ಇರಲಿ ಅಂತ. ಆ ರೀತಿ ಯ ಸ್ವಾದ ದ ಮೂವಿ #ದಿಯಾ!
ದಿಯಾ ನಿಮ್ಮನ್ನು ಕಾಡುತ್ತೆ,ಕಾಡಲು ಕಾರಣಗಳಿವೆ. ಕಾರಣಗಳಿಗೆ ನೀಡಬೇಕಾದ ಉತ್ತರವೂ ಕೂಡ ನಿಮ್ಮನ್ನು ಕಾಡಿಸುತ್ತದೆ! ಕೆಲವೊಂದು
ಎಷ್ಟು ಕಾಡಬೇಕೋ, ಅಷ್ಟೇ ಕಾಡಬೇಕು, ಅದು ಅತಿಯಾದರೆ, ಕಾಡುವುದೇ ಪರಮ ವೇದನೆಯಾಗಿ ಬಿಡುತ್ತದೆ! ಸಹಿಸಲು ಅಸಾಧ್ಯ
ಅತಿಯಾದ ಖುಷಿಗೂ...ಅತಿಯಾದ ವೇದನೆಗೂ ಪ್ರೀತಿಯೇ ಕಾರಣ!
ತಮಿಳಿನ 96 ಎಂಬ ಚಿತ್ರವನ್ನ ನೋಡಿ ಅತ್ತಿದ್ದು ಬಿಟ್ಟರೆ ಕೆಲ ದಿನಗಳ ಹಿಂದೆ ರಿಲೀಸ್ ಆದ ಕನ್ನಡದ "ಕಥಾ ಸಂಗಮ" ಚಿತ್ರದ ಒಂದು
ಭಾಗವಾದ "ಲಚ್ಚವ್ವ"ನನ್ನ ನೋಡಿ ಅತ್ತಿದ್ದೆ, ತಾನು, ತನ್ನವರು, ತಮ್ಮೂರು ಇಷ್ಟೇ ನನ್ನ ಪ್ರಪಂಚ ಅಂತ ಬದುಕ್ತಿರೋಳನ್ನ ಬೇರೊಂದು
ಪ್ರಪಂಚಕ್ಕೆ ಕರೆದುಕೊಂಡು ಬಂದಾಗ ಎಷ್ಟು ಕಸಿವಿಸಿಯಾಗ್ತಾಳೆ ಅನ್ನೋದನ್ನ ಲಚ್ಚವ್ವ ಪಾತ್ರಧಾರಿ ಅಷ್ಟು ನೈಜವಾಗಿ ಅಭಿನಯಿಸಿ
ತೋರಿಸಿದ್ದಳು, ಇದೇ ಕಾರಣಕ್ಕೆ ನಾನು ಆ ಕ್ಷಣ ಭಾವುಕನಾಗಿದ್ದು.
ಇವತ್ತು ನನ್ನೊಳಗಿನ ಭಾವುಕ ವ್ಯಕ್ತಿಯನ್ನು ನಿಮಗೆಲ್ಲ ಪರಿಚಯಿಸುವಂತೆ ಮಾಡಿದ್ದು #ದಿಯಾ ಎಂಬ ಕನ್ನಡ ಸಿನಿಮಾ, ನಿನ್ನೆ ರಾತ್ರಿ
ಮೊಬೈಲಲ್ಲಿ ನೋಡ್ದೆ, ಯಾಕಾದ್ರೂ ನೋಡಿದ್ನೊ ಅನ್ನುವಷ್ಟರ ಮಟ್ಟಿಗೆ ಬೇಸರ ಆಯ್ತು, ಇಡೀ ರಾತ್ರಿ ನಿದ್ದೆನೇ ಬರ್ಲಿಲ್ಲ, ಚಿತ್ರ ಅಷ್ಟೊಂದು
ಕಾಡ್ತಿತ್ತು, ಚಿತ್ರದ ಪ್ರತಿಯೊಂದು ದೃಶ್ಯಗಳು ಪ್ರೇಕ್ಷಕರಲ್ಲಿದ್ದ ಭಾವುಕ ವ್ಯಕ್ತಿಯನ್ನು ಬಡಿದೆಬ್ಬಿಸಿ ಆಚೆ ತೆಗೆಯುವಂತಿದ್ದವು, 
ಅದೆಷ್ಟೊ ಸಿನಿಮಾಗಳನ್ನು ನೋಡಿ ಆನಂದಿಸಿದ್ದೇನೆ ಆದರೆ ಈ ಸಿನಿಮಾ ಮನದ ಮೂಲೆಗಳನ್ನು ಹೊಕ್ಕಿವೆ..


❤️ ಸಚ್ ಅನ್ ಎಕ್ಸಲೆಂಟ್ ಸ್ಕ್ರೀನ್ ಪ್ಲೆ ಇನ್ ರೀಸೆಂಟ್ ಟೈಮ್ 

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...