Wednesday, June 19, 2019

#ಸಿಕ್ಕ ಬಾಲ್ಯ ಸ್ನೇಹಿತನ'(ರು) ಮದುವೆಯಲ್ಲಿ..!


ಕಾಲ ಎಲ್ಲರನ್ನೂ  ಎಲ್ಲವನ್ನೂ ಬದಲಿಸುತ್ತೆ ಅಂತಾರೆ, ಅದೇನೇ ಇರಲಿ, ನಾವು-ನೀವೆಲ್ಲರೂ ಬದಲಾಗಿರುವುದಂತೂ ಸತ್ಯ. ನಾನಂತೂ ಹೈ-ಸ್ಕೂಲ್  ಅಥವಾ PUC ಲಿ  ಇದ್ದ ಹಾಗೆ ಈಗ ಇಲ್ಲ…ನೀವೂ ಬದಲಾಗಿದ್ದೀರಿ ಅಂತ ಗೊತ್ತು. ನಾನೇನು ಬದಲಾಗಿಲ್ಲ ಅಂತ ಮಾತ್ರ ಹೇಳ್ಬೇಡಿ…ಕಡೇ ಪಕ್ಷ ಉದ್ದ ಅಗಲ ಆದ್ರೂ ಆಗಿದ್ದೀರಿ ತಾನೆ..ಇದೇ ತಾನೇ ಬದಲಾವಣೆ 🤣

ಈ ವಿಷಯ ಬರೀಬೇಕು ಅಂತ ಆಲೋಚನೆ ಬಂದಿದ್ದೆ ಬಾಲ್ಯದ ಗೆಳೆಯನ ಮದುವೇಗೆ ಹೋಗಿದ್ದಾಗ
 ಅವತ್ತು ತುಂಬಾ ವರ್ಷಗಳಾದ ಮೇಲೆ  High-School/PUC  ಗೆಳೆಯರನ್ನ ನೋಡಿದೆ.  ಕೆಲವೊಂದು  ವೈಯಕ್ತಿಕ ಕಾರಣಗಳಿಗೆ ಬದುಕಿನ ಅನಿವಾರ್ಯತೆ ನನ್ನ ಬ್ಯುಸಿ ಅನ್ನಾಗಿಸಿ ಇವರುಗಳ ಜೊತೆ ಭೇಟಿ ಅಥವಾ ಹೆಚ್ಚು ಮಾತನಾಡಿರಲಿಲ್ಲ. ಆದರೆ ಭೇಟಿ ಆದವರಲ್ಲಿ ಮಾಗಿ, ಎಮ್ಮಿ(ಪ್ರೀತಿಯಿಂದ ಕರೆಯೋದು), ಮುಸ್ತಾಫಾ ಮತ್ತು ಸಚಿನ್ ಮಾತ್ರ ೫-೬ ವರ್ಷ ಹಿಂದೆ ಹೇಗಿದ್ದರೋ ಇನ್ನು ಹಾಗೇನೇ ಅನ್ನೋ ತರ ಅದೇ ಮುಗ್ದತೆ... ಮಾಗಿ ಅಲ್ಲಿ ಮುಗ್ದತೆ ಅನ್ನೊದೇ ತಪ್ಪು🤣...ತುಂಟಾಟ ಅಂತ ಅನ್ನಬಹುದು...ಮಾಗಿ ಜೊತೆ ಅಷ್ಟು ಸಮಯ ಕಲಿಯದೇ ಹೋದ್ರು ಶಾರ್ಟ್ ಟೈಮ್ ಅಲ್ಲೇ ನನಗನಿಸಿದ್ದು ಅವನಿನ್ನೂ ಹಳೆಯ ಮಾಗಿಯೇ ಅಂತ, ಅದು ಖುಷಿ ಕೊಟ್ಟ ವಿಚಾರ... ತುಂಬಾ ವರ್ಷ ಕನೆಕ್ಟ್ ಇಲ್ಲದೆ ಹೋದ್ರು ಕೂಡಾ PUC/High-School ಲಿ ಹೇಗ್ ಇದ್ದನೋ ಅದೇ ಅನುಭವ... It's Just Took 1 Min 2 Connect ಅಂತ ಹೇಳಬಹುದು.

              PUC ಮುಗಿಸಿ ಆಗಲೇ ೬-೭ ವರ್ಷಗಳು ಕಳೆದಿವೆ  ಕೆಲವೊಮ್ಮೆ ಆಕಸ್ಮಿಕವಾಗಿ  ಸಿಗುವ ಹಳೆಯ ಸ್ನೇಹಿತರು ಸಿಕ್ಕರೆ  ದೂರದಿಂದ ನೋಡುವಾಗ ಅನಿಸುತ್ತೆ, ತುಂಬಾ ಮಾತನಾಡಬೇಕು, ಮಾತನಾಡಲು ತುಂಬಾ ವಿಷಯಗಳಿವೆ, ಮಾತನಾಡಿ ತಂಬಾ ವರ್ಷ ಆಯಿತು ಅಂತ. ಆದರೆ ನಮ್ಮ ಹತ್ತಿರ ಬರುತ್ತಿದ್ದಂತೆ ಬರೀ ಮುಗುಳುನಗೆಯಲ್ಲಿಯೇ ಮಾತು ಮುಗಿಯುತ್ತದೆ. ಆದರೆ
ಹೆಚ್ಚು ಸಮಯ ಸಿಕ್ಕಿದ್ದು ಎಮ್ಮಿ ಮತ್ತು ಮುಸ್ತಾಫಾ ಜೊತೆ... ೧೦೦% ನನಗೆ ಅವರು ೫-೬ ವರ್ಷ ಹಿಂದೆ ಹೇಗಿದ್ರೋ ಅದೇ ವ್ಯಕ್ತಿತ್ವ ಅದೇ ಮುಗ್ದತೆ ಅದೇ ಪ್ಯೂರಿಟಿ ಅಂತ ಅನ್ನಸಿದ್ದು.

ಮದುವೆ ಹುಡುಗನಿಗೆ ವಿಶ್ ಮಾಡಿ ನಮ್ಮ ಹುಡುಗನ್ನ ಚೆನ್ನಾಗಿ ನೋಡ್ಕೊಳಮ್ಮ ಅಂತ ಮದುವೆ ಹುಡಿಗಿಗೆ  ಹೇಳಿ ಮದುವೆ ಮನೆಯಿಂದ ಕಾಲ್ಕಿತ್ತಿ ಅಲ್ಲೇ ಊರಾಚೆ ಇರುವ ಟೀ ಶಾಪ್ ಅಲ್ಲಿ ಸ್ಪೆಷಲ್ K-ಟೀ ಕುಡಿದು ಹಳೇದನೆಲ್ಲ ಕೆಣಕಿ ತಿರುಚಿ ನಮ್ಮ ದಾರಿ ಹಿಡಿದಾಗ ಸಂಜೆ ಆಗಿತ್ತು.

ಒಂದು ಕಡೆ ತುಂಬಾ ವರ್ಷಗಳಿಂದ ನೋಡದ ಬಾಲ್ಯದ ಗೆಳೆಯರ ಜೊತೆ ಕೆಲ ಸಮಯ ಕಳೆದ ಖುಷಿ ಇನ್ನೊಂದು ಕಡೆ ಮದುವೆ ಆಗಿ ಇನ್ನೊಂದು ವಿಕೆಟ್ ಬಿತ್ತು ಅನ್ನೋ  ಬೇಜಾರು... ಅವನ ಮದುವೆ ವಿಷಯ ಗೊತ್ತಾಗಿದ್ದೇ  ಮದುವೆಗೆ ಬಾ ಅಂತ ಕಾಲ್ ಮಾಡಿದಾಗ ಅವನ ಲೈಫ್ ನಲ್ಲಿ ಏನಾಗತಿದೆ ನಂಗೆ ಅಪ್ಡೇಟ್ ಇಲ್ಲ... ಜೀವನದಲ್ಲಿ ಬರುವವರು ಒಂದಿಲ್ಲೊಂದು ಕಾರಣಕ್ಕಾಗಿಯೆ ಬಂದಿರುತ್ತಾರೆ ಮದುವೆ ಯು ಹಾಗೆಯೇ
ಆದರೂ ಮದುವೆ ಬಗ್ಗೆ ನನ್ನ ಒಪೀನಿಯನ್ ಹೇಳೇ ಬೇಕು.. ನನ್ನ ಪ್ರಕಾರ

"ಮದುವೆ ಅನ್ನೋದು ಒಂಥರಾ ಹಬ್ಬ ಇದ್ದಂಗೆ ತನ್ನನ್ನು ಮತ್ತು ತನ್ನವರನ್ನು ನಿಯಂತ್ರಿಸುವ ತಾಕತ್ತು ಮತ್ತು ಕಲೆ ಇರೋನಿಗೆ
ಮದ್ವೆ ಅನ್ನೋದು ಮಾರಿ ಹಬ್ಬ ಇದ್ದಂಗೆ ಮೇಲಿನದು ತಿಳಿಯದವನಿಗೆ ಹಬ್ಬದಲ್ಲಿನ ಕುರಿಯಂತೆ "

ನನ್ನ ವಯಕ್ತಿಕ ಜೀವನದಲ್ಲೂ ಕೂಡಾ ತುಂಬಾ ಗೆಳೆಯರ ಜೊತೆ ಕೆಲವೊಂದು ಸನ್ನಿವೇಶದಲ್ಲಿ Just for Time being Distance-Maintain  ಮಾಡಿದೀನಿ ಅದು ನನ್ನ ಬದುಕಿನಲ್ಲಾದ ಕೆಲವೊಂದು ಅನಿರೀಕ್ಷಿತ ಘಟನೆಗಳಿಗೆ ಹೊರತು ಯಾರನ್ನು  Avoid  ಮಾಡಬೇಕು ಅಂತ ಅಲ್ಲ.... Basically ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಾದಾಗ ನಾನು ಫ್ರೀಜ್ ಆಗತೀನಿ ಆ ಟೈಮ್ಅಲ್ಲಿ ನಂಗೆ ನನ್ನದೇ ಅದ Space ಬೇಕು ಅಷ್ಟೇ.. ಅದನ್ನ ಬಿಟ್ಟು ಇನ್ನೇನು ಇಲ್ಲಾ

"ಸರಿ ತಪ್ಪುಗಳಾಚೆ ಒಂದು ಬಯಲಿದೆ ನಾನು ನಿನಗಲ್ಲಿ ಸಿಗುತ್ತೇನೆ..!"

ಸಮಯ ಕಳೆದಂತೆ ನಮ್ಮ ಜೀವನದಲ್ಲಿ ಅದೆಷ್ಟು ಜನ ಬಂದು ಹೋಗ್ತಾರೆ. ಕೆಲವರು  ಬದುಕನ್ನು ಬದಲಾಯಿಸುತ್ತಾರೆ ಅದು ಒಳ್ಳೆಯದಕ್ಕೊ ಕೆಟ್ಟದಕ್ಕೊ, ಒಟ್ಟಾರೆ ಬದಲಾವಣೆಗೆ ಅವರು ಕಾರಣರಾಗಿರುತ್ತಾರೆ. ಇನ್ನೂ ಕೆಲವರು ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ಮರೆಯಾಗುತ್ತಾರೆ. ನಮ್ಮ ಜೀವನ ಪೂರ್ತಿ ಇರಬೇಕೆಂದುಕೊಂಡವರು ಅದೇನೋ ಸಮಸ್ಯೆಗಳಿಂದ ಹೇಳದೆ ಕೇಳದೆ ಹೋಗುತ್ತಾರೆ...ಬರುವವರು ಒಂದಿಲ್ಲೊಂದು ಕಾರಣಕ್ಕಾಗಿಯೆ ಬಂದಿರುತ್ತಾರೆ...!

ಮತ್ತೆ ಸಿಗುವಾ ನಾಳೆಗಳಿದ್ದರೆ...!!!

Saturday, June 8, 2019

ಸಾವಿನ ಮನೆಯಲ್ಲಿ...!

ಸಾವಿನ ಮನೆಯಲ್ಲೊಂದು
ಮುಂಗೋಪವಿಲ್ಲದ ಮಗುವಿನ ನಗೆಯಿದೆ

ಸಾವಿನ ಮನೆಯಲ್ಲೊಂದು
ಹಗೆಯನ್ನು ಮರೆತು ಬಂದ ಬಂಧು ಬಳಗವಿದೆ

ಸಾವಿನ ಮನೆಯಲ್ಲೊಂದು
ಸತ್ತ ದೇಹಕ್ಕೆ ವ್ಯಕ್ತಿತ್ವದ ಬಣ್ಣ ಬಳಿದು ಅಂತೆ ಕಂತೆಯ ಕತೆಯನ್ನು ಹರಡಿಸಿ ಹೇಳುವ ಚರ್ಚಾ ಬಳಗವಿದೆ

ಸಾವಿನ ಮನೆಯಲ್ಲೊಂದು
ವಯಸ್ಸನ್ನು ಅಳೆಯುವ, ಅವರಿವರ ಮನೆಯ ಹಿರಿಯರನ್ನು ನೆನೆಯುವ ಪರಿಪಾಠವಿದೆ

ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಕರ್ಪೂರ, ಸುಗಂಧವನ್ನು ಹಚ್ಚಿ ಶೃಂಗಾರಿಸಿ ಕಳುಹಿಸುವ ಯಾತ್ರೆಯದು, ಎಲ್ಲರನ್ನೂ ಎಚ್ಚರಿಸುವ ಯಾತ್ರೆಯದು

ಸಾವಿನ ಮನೆಯಲ್ಲೊಂದು
ಮೌನದ ನಡುವೆ ಸಾಗುವ ಸಂಭಾಷಣೆಯಿದೆ
ಹಸಿವನ್ನೇ ಮರೆಸುವ ದುಃಖದ ಕಾರ್ಮೋಡವಿದೆ
ಮತ್ತೆ ಮತ್ತೆ ಎಚ್ಚರಿಸುತ್ತಿದೆ
ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಎಲ್ಲರನ್ನೂ ಎಚ್ಚರಿಸುವ ಯಾತ್ರೆಯದು..!💯

Wednesday, June 5, 2019

ಹುಟ್ಟು ಸಾವಿನ ಮಧ್ಯೆಯೊಂದಷ್ಟು ಬದುಕು..!


ಎದುರಿಗಿದ್ದಾಗ ಅದ್ಯಾವುದೋ ಅಹಂಕಾರಕ್ಕೆ ಆತ್ಮಾಭಿಮಾನಕ್ಕೆ ಸಣ್ಣ ಸಣ್ಣ ವಿಷಯಗಳಿಗೆ ಮುಖತಿರುವಿ ನಮ್ಮವರಿಂದಲೇ ಎದ್ದು ಬಂದುಬಿಟ್ಟಿರ್ತೀವಿ ಅಲ್ಲಿ ತಪ್ಪು ಯಾರದ್ದು ಅನ್ನುವುದಕ್ಕಿಂತ ಹೆಚ್ಚು ನಮ್ಮಲ್ಲಿನ ಜಂಭ ಅಹಂಕಾರ ಸೋಲ್ಬೇಡ ಅಂತ ಪದೇ ಪದೇ ಹೇಳಿ ಗೆಲ್ಲಿಸ್ಲಿಕ್ಕಿ ಪ್ರಯತ್ನ ಪಟ್ಟು ನಮ್ಮವರನ್ನೇ ನಮ್ಮಿಂದ ದೂರ ಮಾಡಿ ನಿಜವಾಗಿ ಸೋಲಿಸಿಬಿಡುತ್ತವೆ. ಆ ಕ್ಷಣಕ್ಕೆ ಸೋಲನ್ನು ಗೆಲುವು ಅಂತ ಸಂಭ್ರಮಿಸೋ ನಾವು ನಾಳೆ ಅವರು ಶಾಶ್ವತ ಮೌನಕ್ಕೆ ಒಳಗಾದಾಗ ಪ್ರಾಯಶ್ಚಿತ್ತದ ಮಾತುಗಳನ್ನಾಡ್ತೀವಿ.

ಬೆಂಗಳೂರು ಯಾಕೊ ರಾತ್ರಿ ನಾಲ್ಕು ಹನಿ ಬಿದ್ದು ಒದ್ದೆ ಒದ್ದೆ..ಬೆಳಿಗ್ಗೆ ನೋಡಿದರೆ ಮಲೆನಾಡಿನ ಬೆಳಗೇನೊ ಅನ್ನುವ ಹಾಗಿದೆ... ವರ್ಷ ಮುಗೀತಾ ಬಂತು.. ಸಾಧಿಸಿದ್ದು ಏನೂ ಇಲ್ಲ. ವರ್ಷ ಹೇಗಿತ್ತು ಅಂದರೆ ನನ್ನ ಪಾಲಿಗೆ ಯಾವತ್ತಿನ ಹಾಗೆ ಆರಕ್ಕೇರದ ಮೂರಕ್ಕಿಳಿಯದ ಎಂದಿನ ಹಾಗೆ.. ನಾನಂತೂ ಏನನ್ನೂ ಕಡಿದು ಗುಡ್ಡೆ ಹಾಕಲಿಲ್ಲ..
ಈ ವರ್ಷ ಬಹಳ ಸಾವು ನೋವು ಸಂಭವಿಸಿಬಿಟ್ಟಿತು... ಯಾಕೊ ಬೇಸರ.. ಹೋದೋರೆಲ್ಲ ಒಳ್ಳೆಯವರು ಅನ್ನೋದು ಬರೀ ಹಾಡೇ ಇರಬಹುದು. ಆದರೆ ಈ ವರ್ಷ ಹೋದವರೆಲ್ಲ ನಿಜವಾಗಲೂ ಒಳ್ಳೆಯವರೇ.

"ಆಸ್ಪತ್ರೆಗೆ ಹೋದಾಗ ಅನ್ಸತ್ತೆ ಬದುಕಿನ ಮೇಲೆ ನಮಗ್ಯಾಕಿಷ್ಟು ವ್ಯಾಮೋಹ ಅಂತ.
ಮನುಷ್ಯನ ವೈರಾಗ್ಯ ಏನಿದ್ರೂ ಕ್ಷಣಿಕ ಅನ್ನೋದು ಮಾತ್ರ ಸುಳ್ಳಲ್ಲ..!"

ವೈಯಕ್ತಿಕವಾಗಿ ಒಂದಿಷ್ಟು ಜನರನ್ನು ಕಳೆದುಕೊಂಡಿದ್ದೇನೆ. ಕೆಲವೊಮ್ಮೆ ವಿನಾಕಾರಣ. ಕೆಲವೊಮ್ಮೆ ನಮ್ಮ ಸಣ್ಣತನ. ಯಾರೊಂದಿಗೊ ಮುನಿಸಿಕೊಳ್ಳುವ ಪ್ರತೀ ಸಂದರ್ಭದಲ್ಲೂ ಯೋಚಿಸುವುದು ನಾನೇನು ಈ ಭೂಮಿಗೆ ಶಾಶ್ವತವಾಗಿರಲು ಬಂದಿದ್ದೇನಾ... ಇಲ್ಲಿರುವುದೇ ಕ್ಷಣಿಕವೆಂದಾಗ ಮುನಿಸೇತಕ್ಕೆ..? ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಂಬಂಧ ಮುರಿಯುವುದು ವಿಷಾದದ ವಿಷಯವೇ... ಬಹಳ ಪ್ರಯತ್ನಿಸುತ್ತೇನೆ ಹಿಡಿದಿಟ್ಟುಕೊಳ್ಳಲು. ಯಾವಾಗ ಅದು ನನ್ನ ನೆಮ್ಮದಿ ಕೆಡಿಸುತ್ತದೆ ಅನ್ನಿಸುತ್ತೊ ಅಲ್ಲಿಗೆ ಮುಷ್ಟಿ ಸಡಿಲಿಸುತ್ತೇನೆ. ಹಾಗೆ ಬಿಟ್ಟ ಯಾವುದರ ಕಡೆಗೂ ಮತ್ತೆ ತಿರುಗಲಾರೆ.. ಕೈ ಮೀರಿ ಮನಸ್ಸಿಲ್ಲದ ಮನಸ್ಸಿನಲ್ಲಿ ಯಾವುದೊ ಸಣ್ಣ ಕ್ಷುಲ್ಲಕ ಕಾರಣಗಳಿಂದ ಕಳೆದುಕೊಂಡ ಸಂಬಂಧಗಳ ಬಗ್ಗೆ ಬಹಳ ನೋವಾಗುತ್ತದೆ. ನಮ್ಮಲ್ಲಿಷ್ಟೊಂದು ಸಣ್ಣತನವೇತಕೆ ಎಂದು..ಕಳೆದುಕೊಂಡ ವಿಷಾದವೊಂದು ಕೊನೆಯ ತನಕ ಜೊತೆಯಾಗುತ್ತದೆ..
2018 ಬಹಳ ಖುಷಿ ಕೊಟ್ಟ ಅಷ್ಟೇ ನೋವು ಕೊಟ್ಟ ವರ್ಷವೆನ್ನಬಹುದು.. ಬೆಳಿಗ್ಗೆ ಎದ್ದಾಗಿನಿಂದ ಕಾಡುತ್ತಿರುವ ಭಾವವಿದು.. 2019 ರಿಂದ ಜಾಸ್ತಿ ಮುಖವಾಡಗಳನ್ನು ಖರೀದಿಸಿ ಕಡಿಮೆ ಅಟ್ಯಾಚ್ ಮೆಂಟ್ ಗಳನ್ನು ಬೆಳೆಸಿಕೊಂಡು ಬದುಕಬೇಕಿದೆ.. ಉಳಿದದ್ದು ಈ ವರ್ಷಕ್ಕೆ ಕೊನೆಯ ದಿನಗಳನ್ನು ನನಗಾಗಿ ಬದುಕಬೇಕಿದೆ..

 ಸಾಧನೆಗಾಗಿನೋ, ಸಂಪಾದನೆಗಾಗಿನೋ ಅಲ್ಲ…
ನಮ್ಮಗೋಸ್ಕರ- ನಮ್ಮತನವನ್ನ ಶಾಶ್ವತವಾಗಿ ಉಳಿಸಿಕೊಳ್ಳೊದಿಕೋಸ್ಕರನಾದಾರೂ ಮನುಷ್ಯ ಬ್ಯೂಸಿಯಾಗಿರಬೇಕು..
ಇಲ್ಲಾಂದ್ರೇ.. ನೆಮ್ಮದಿ ಹುಡ್ಕೊಂಡು ಹಿಮಾಲಯಕ್ಕೋ, ಕಷ್ಟಗಳನ್ನ ಹಿಡ್ಕೊಂಡು ಪುಣ್ಯಕ್ಷೇತ್ರಗಳಿಗೋ ಅಲಿಬೇಕಾಗುತ್ತೆ..
ಬದುಕು ಮುಗಿದು ಹೋಗುವ ಮೊದ್ಲೇ…ಬದಲಾಗಿಬಿಡಬೇಕು. ನಮ್ಮತನವನ್ನ ಉಳಿಸಿಕೊಂಡು ಬಿಡಬೇಕು..!

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...