Tuesday, January 30, 2018

#Crow – ಕಾಕಾ....


                                             ಆ ದಿನ ನಾನು ಶಿವಾಜಿನಗರದ ಆರ್ ಟಿ ಓ ಕಚೇರಿಯಿಂದ ವಾಪಾಸ್ ಬರುತ್ತಾ ಇದ್ದೆ. ನಾರ್ಮಲ್ ಆಗಿ ಕೆಲಸ ಮುಗಿಸ್ಕೊಂಡು ,ಅಬ್ ನಾರ್ಮಲ್ ಥರ ಸುತ್ತ ಮುತ್ತ ನೋಡ್ಕೊಂಡು ,ಅಡ್ಡಾಡ್ಕೊಂಡು, ಅಲ್ಲಲ್ಲಿ ನಿಲ್ಸಕೊಂಡು ಕೆಲವೊಮ್ಮೆ ಕೆಲವು ಸಬ್ಜೆಕ್ಟ್ ಗಳನ್ನು ಹಂಗೆ ನೋಡ್ಕೊಂಡು ಆಫೀಸ್ ಹೋಗ್ತಾ ಇದ್ದೆ . ವಿಧಾನ ಸೌಧ ಹತ್ರ ಬರ್ತಾ ಇದ್ದ ಹಾಗೆ ನನಗೆ ಕಂಡದ್ದು ಮೊದಲು ಈ ಕಾಗೆ . ನಂತರ ವಿಧಾನ ಸೌಧ. ಹಂಗೆ ಬೈಕ್ ಸೈಡ್ ಹಾಕಿ ಫ್ರೇಮಿಂಗ್ ನೋಡ್ಕೊಂಡು ಏನಾದ್ರು ವಿಶೇಷ ಇದ್ಯಾ ಅಂತ ಕಾಯ್ತಾ ನಿಂತೆ . ಅಲ್ಲೇ ಬಸ್, ಟೂ ವೀಲರ್ ಅಲ್ಲಿ ಪಾಸ್ ಅಗೊರೆಲ್ಲ ನನ್ನೇ ನೋಡ್ಕೊಂಡು ಏನ್ ನಡೀತಾ ಇದೆ ಅಂತ ಆಚೆ ಈಚೆ ತಲೆ ತಿರುಗಿಸಿತ್ತಿರುವಾಗಲೇ , ಕಾಗೆ ತನ್ನ ತಲೆಯನ್ನೂ ಹೀಗೆ ಬಾಗಿಸಿದಾಗ ಒಂದು ಕ್ಲಿಕ್. ಈ ಚಿತ್ರದಲ್ಲಿ ಕಾಣುವ ಕಾಗೆ ಮತ್ತು ಅದರ ಪೊಸಿಶನ್ ಮತ್ತು ಹಿಂಬದಿಯಲ್ಲಿ ಇರುವ ವಿಧಾನ ಸೌಧ ! ನಮ್ಮ ರಾಜಕೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಅಲ್ಲವಾ...!!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...