Sunday, February 4, 2018

#ದೊಡ್ಡ_ಖುಷಿಗಳ_ಹುಡುಕಾಟದಲ್ಲಿ_ಮರೆತ_ಸಣ್ಣ_ಖುಷಿಗಳು



                          ಅಲ್ಲೆಲ್ಲೋ ತರಗತಿಯ ಹತ್ತಾರು ಮಕ್ಕಳೊಂದಿಗೆ ಒಂದಾಗಿದ್ದ ನಾವು, ನಾನೊಬ್ಬ ಸಾಧಕನಾಗಬೇಕು, ಎಲ್ಲರಿಂದ ಎತ್ತರದಲ್ಲಿ ನಿಲ್ಲಬೇಕು, ಬೆಳೆಯಬೇಕು ಎನ್ನುತ, ದೊಡ್ಡ ಖುಷಿಗಳಲೋಕದ ಹುಡುಕಾಟದ ಹೋರಾಟದಲ್ಲಿ ಬೆಳೀತಾ ಬೆಳೀತಾ ಈ ಸಣ್ಣ ಖುಷಿಗಳ ಮಧ್ಯದಲ್ಲೇ ಇದ್ದರೂ ದೊಡ್ಡದೇನೋ ಒಂದರ ಹುಡುಕಾಟದಲ್ಲಿ ಇದನ್ನೆಲ್ಲ ಅನಂದಿಸುವುದನ್ನು ಮರೆತಿದ್ದೇವೆ. ಬಸ್ಸಲ್ಲಿ, ಪಕ್ಕದಲ್ಲಿ ಮಗುವೊಂದು ನಮ್ಮನ್ನು ನೋಡಿ ನಕ್ಕಾಗ , ಆಟವಾಡಿಸಬೇಕು ಎಂದನಿಸಿದರೂ, ಎಲ್ಲಿ ಬೇರೆಯವರು ತಪ್ಪು ತಿಳಿಯುತ್ತಾರೋ ಎಂದುಕೊಳ್ಳುತ್ತಾ ಆಥವಾ ನಮ್ಮ ಆಫೀಸ್ ಟೆನ್ಶನ್ನಲ್ಲಿ ಅದರತ್ತ ನೋಡದೆ ಆ ಮಗು ಕೊಡುವ ಖುಷಿಯನ್ನು ಕಳಕೊಳ್ಳುತಿದ್ದೇವೆ! ದುಡಿಯೋಣ ಆದರೆ ದಿನದ ನಗು, ಸಂತೋಷವನ್ನು ಮರೆತಲ್ಲ, ಜೀವನವೇ ಆಗಿರುವ ‘ಸಣ್ಣ ಸಣ್ಣ’ ಖುಷಿಗಳನ್ನು ಬಿಟ್ಟಲ್ಲ. ದಿನದಲ್ಲಿ ದುಡಿಯದೆ ಇರುವ ಸಮಯದಲ್ಲಾದರೂ ಮಕ್ಕಳಾಗಿರೊಣ...!!!💯

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...