Sunday, August 4, 2024

#ಬದುಕು ಮಾತ್ರ ಆಧುನಿಕವಾಗುವುದೇ ಇಲ್ಲ...!📚📲

   ಹಣ ಮತ್ತು ತಂತ್ರಜ್ಞಾನ ಸೇರಿದರೆ ಮನೆಯೇ ತಂತ್ರಾಲಯ ಆಗುತ್ತದೆ. ಮನೆತುಂಬ ಗ್ಯಾಜೆಟ್ಟುಗಳು ತುಂಬುತ್ತವೆ. ವರ್ಷಕ್ಕೊಮ್ಮೆ ಅವು ಆಧುನಿಕವಾಗುತ್ತಾ ಹೋಗುತ್ತವೆ. ಹೊಸ ವರ್ಷನ್‌ಗಳು ಬರುತ್ತಿರುತ್ತವೆ. ಬದುಕು ಮಾತ್ರ ಆಧುನಿಕವಾಗುವುದೇ ಇಲ್ಲ. 

ನಾವು ಅದೇ ಹಳೆಯ ನೆನಪುಗಳಲ್ಲಿ, ಹಳೆಯ ವರಸೆಗಳಲ್ಲಿ, ಹಳೆಯ ಜಗಳಗಳಲ್ಲಿ ಮುಳುಗಿಹೋಗಿರುತ್ತೇವೆ.
ಇತ್ತೀಚೆಗೆ Facebook, Instagram ಗಳೆಲ್ಲಾ ನನ್ನನ್ನು ತೀರಾ Excite ಮಾಡುತ್ತಿಲ್ಲ..
ಫೇಸ್ಬುಕ್ ವೈಯುಕ್ತಿಕ ಅಕೌಂಟ್ ಓಪನ್ ಮಾಡುವುದೇ ರೇರ್ ಆಗಿದೆ..ಓಪನ್ ಮಾಡಿದರೂ Lit up eyes ಜೊತೆ ನೋಡದೇ ಹಾಗೆ ಸುಖಾಸುಮ್ಮನೆ Scroll ಮಾಡುವುದೇ ಹೆಚ್ಚು! ಸ್ವಂತ ಫೋಟೋ-ಸೆಲ್ಫೀಗಳು ಅಂತೂ zero ಇಂಟರೆಸ್ಟ್!

ಜೀವನದ ಒಂದು ಹಂತದ ಬಳಿಕ ಅಥವಾ ಬದುಕಿನ ಜವಾಬ್ದಾರಿಗಳು ಹೆಚ್ಚಾದಾಗ ಈ ಸಾಮಾಜಿಕ ಜಾಲತಾಣ..ಪೋಸ್ಟು,ಲೈಕ್,ಟ್ರೆಂಡುಗಳು ಇವೆಲ್ಲಾ ಗೌಣ ಅನಿಸಿಬಿಡುತ್ತೆ..
ಇದೊಂದು ಭ್ರಮಲೋಕ..ರಿಯಾಲಿಟಿಯ ಸವಾಲುಗಳಿಗೂ-ಇಲ್ಲಿಗೂ ಕೆಲವೊಮ್ಮೆ ಲಿಂಕೇ ಇಲ್ಲ..ಸಾವಿರಾರು ಫ್ರೆಂಡ್ಸ್ ಇದ್ದರೂ ಆಗಾಗ ಮನದ ಮಾತುಗಳ ಹೇಳೋಕೆ ಒಬ್ಬರು ಇರದಂತಹ ಸತ್ಯಗಳಿವೆ!
ಸುಮ್ಮನೆ ಡಾಕುಮೆಂಟರಿ ಪ್ಲೇ ಮಾಡಿ ಬೇಕಾದರೆ ನಿರಂತರ ನೋಡಬಯಸುತ್ತೆ ಮನ..ಹೊಸ ಸಕಾರಾತ್ಮಕ ವಿಷಯಗಳ ತಿಳಿದುಕೊಳ್ಳಲು ಮೆದುಳು ಹೆಚ್ಚು ಬಯಸುತ್ತದೆ..
ಎದ್ದರೂ ಬಿದ್ದರೂ ಇಲ್ಲಿ ತಂದು ರಾಶಿ ಹಾಕೋದಕ್ಕಿಂತಾ ತಮ್ಮ ಪಾಡಿಗೆ ತಾವಿರೋಣ,ನಮ್ಮ ಗುರಿಗಳು,ಕರ್ತವ್ಯಗಳತ್ತ ಫೋಕಸ್ ಮಾಡೋಣ ಸಾಕು ಅನಿಸಿಬಿಡುತ್ತೆ!
ಈ Virtual Fantasy ಸಾಕು..ತಂದೆ ತಾಯಿ ಮಡದಿ ಮಕ್ಕಳು ಹೀಗೆ ಸಂಬಂಧಗಳ ಗಟ್ಟಿಮಾಡಿ ಸುಖ ಕಷ್ಟಗಳ ಮಾತಾಡುವ..ಸಾಧ್ಯವಾದಷ್ಟು ನೋವಿಗಳಿಗೂ ಸ್ಪಂದಿಸುವ, ಚಿಕ್ಕ ಖುಷಿಗಳ ಸಂಭ್ರಮಿಸುವ, ವೃತ್ತಿಯಲ್ಲಿ ಇನ್ನಷ್ಟು Creative ಆಗುವ ಎನ್ನುವ Realisation ಹೆಚ್ಚಾಗತೊಡಗುತ್ತೆ..!
ನಾನೇ Studious or limited ಆಗಿಬಿಟ್ನಾ
ಅಥವಾ ನಿಮಗೂ ಹಾಗೆ ಅನಿಸಿದ್ಯಾ?
                                                                                                                                                                                                                                                                        - ಮತ್ತೆ ಸಿಗುವಾ ನಾಳೆಗಳ್ಳಿದ್ದರೆ

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...