Saturday, April 28, 2018



#Bharath_ki_Baat
ಮೊನ್ನೇ ಲಂಡನ್ ನಲ್ಲಿ "ಭಾರತ್ ಕಿ ಬಾತ್ ಸಬ್ ಕೆ ಸಾತ್" ಸಂದರ್ಶನ ನೋಡುತ್ತಿದ್ದೆ. ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋದಿಜಿಯಿಂದ ಬರುತ್ತಿದ್ದ ಒಂದೊಂದು ಉತ್ತರವೂ ಅವರ ಮೇಲಿನ ಗೌರವವನ್ನು ನೂರ್ಮಡಿಗೊಳಿಸುತ್ತಿತ್ತು. ಭಾರತಮಾತೆಯ ಸುಪುತ್ರನ ಮಾತುಗಳನ್ನು ಕೇಳುತ್ತಾ ತಲೆಯೆತ್ತಿ ಗರ್ವದಿಂದ ಹೇಳಬೇಕೆನಿಸುತ್ತಿತ್ತು ನಾನೊಬ್ಬ ಭಾರತೀಯ.. ನನ್ನ ದೇಶ ಭಾರತ, ಕೊನೆಯಲ್ಲಿ ಸಂದರ್ಶಕ ಕೇಳಿದ ಪ್ರಶ್ನೆ, "ಮೋದೀಜಿ ಇತಿಹಾಸದ ಪುಟಗಳಲ್ಲಿ ನಿಮ್ಮನ್ನು ಜನ ಹೇಗೆ ನೆನಪಿಸಿಕೊಳ್ಳಬೇಕೆಂದು ಬಯಸುವಿರಿ?"
ಮೋದಿಜಿ ಒಂದು ಕ್ಷಣ ಮೌನ ತಳೆದು ನಂತರ ಸಭೆಯಲ್ಲಿದ್ದವರನ್ನೆ ಕೇಳಿದರು.
"ಅದೆಷ್ಟೋ ಸಹಸ್ರ ವರ್ಷಗಳಿಂದ ವಿಶ್ವಕ್ಕೆ ಪಥವನ್ನು ತೋರಿಸುತ್ತಿರುವ ಅತ್ಯಂತ ಪುರಾತನ ಹಾಗೂ ಶ್ರೇಷ್ಟವಾದ ವೇದವನ್ನು ರಚಿಸಿದವರು ಯಾರೆಂದು ಯಾರಿಗಾದರೂ ನೆನಪಿದೆಯಾ?!" ಸಭೆ ಮೌನವಾಗಿತ್ತು.
ಮುಂದುವರೆಯುತ್ತಾ ಮೋದೀಜಿ, "ಇಂತಹ ಶ್ರೇಷ್ಟ ವೇದದ ರಚನಾಕಾರರನ್ನೆ ನೆನಪಿಟ್ಟುಕೊಳ್ಳದ ಇತಿಹಾಸದಲ್ಲಿ ಮೋದಿ ಏನೂ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಷ್ಟೆ. ಇತಿಹಾಸದಲ್ಲಿ ಹೆಸರು ಮಾಡುವ ಉದ್ದೇಶದಿಂದ ಬಂದವನು ನಾನಲ್ಲ ಆ ಆಸೆಯೂ ಇಲ್ಲ. ಒಬ್ಬರಿಗೆ ಶಿಕ್ಷಕರ ಕೆಲಸ ಸಿಕ್ಕಿರಬಹುದು ಇನ್ನೊಬ್ಬರಿಗೆ ಚಾಲಕನ ಕೆಲಸ ಸಿಕ್ಕಿರಬಹುದು ಮತ್ತೊಬ್ಬ ವ್ಯಾಪಾರ ಮಾಡಬಹುದು ಅಂತೆಯೇ ನನಗೆ ನಿಮ್ಮ ಸೇವೆ ಮಾಡುವ ಪ್ರಧಾನ ಸೇವಕನ ಕೆಲಸ ಸಿಕ್ಕಿದೆಯಷ್ಟೆ ಇದಕ್ಕಿಂತಲೂ ಹೆಚ್ಚಿನದ್ದೇನೂ ಇಲ್ಲ. ಇತಿಹಾಸದಲ್ಲಿ ಅಮರನಾಗಲು ನಾನು ಇಷ್ಟ ಪಡುವುದೂ ಇಲ್ಲ. ಒಂದು ವೇಳೆ ಅಮರ ಆಗಬೇಕಿದ್ದರೆ ಅದು ನನ್ನ ದೇಶ ಅಜರಾಮರವಾಗಬೇಕು. ಜಗತ್ತು ನೆನಪಿಸುವಂತಿದ್ದರೆ ನನ್ನ ದೇಶವನ್ನು ನೆನೆಯಬೇಕು. ನನ್ನ ದೇಶದ ಭವಿಷ್ಯವನ್ನು ನೋಡಬೇಕು. ಜಗತ್ತು ನನ್ನ ದೇಶದ ಬಗ್ಗೆ ಇಡಿ ವಿಶ್ವಕ್ಕೆ ಮಾನವನ ಅಭಿವೃದ್ದಿಗೆ ದಾರಿ ತೋರಿಸುವ ವಿಶ್ವವನ್ನು ಸಂಕಷ್ಟದಿಂದ ಪಾರುಮಾಡಬಲ್ಲ ಸಾಮರ್ಥ್ಯವನ್ನು ರಾಷ್ಟ್ರ ಎಂದು ಹೆಮ್ಮೆಯಿಂದ ಹೇಳಬೇಕು. ಮೋದಿಯ ಹೆಸರಲ್ಲ ರಾಷ್ಟ್ರದ ಹೆಸರನ್ನು ರಾರಾಜಿಸುವಂತೆ ಮಾಡಲು ಜೀವನ ಮುಡಿಪಾಗಿಡುತ್ತೇನೆ".
ವಾಹ್ ಅದೆಂತ ಅದ್ಬುತ ನುಡಿಗಳು. ಕೇಳಿದ ದೇಶವಾಸಿಗಳ ದೇಶಭಕ್ತಿಯನ್ನು ಬಡಿದೆಬ್ಬಿಸಲು ಇಷ್ಟು #Jai_Hind #Vande_Mataram...💯
ಸಾಕಲ್ಲವೇ?....

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...