#Hawking_into_Blackhole
ನನ್ನನ್ನು ಬಲುವಾಗಿ ಕಾಡಿದ ವಿಜ್ಞಾನಿ! ಬದುಕೇ ಸಮಸ್ಯೆಯಾದಾಗ ಅವನು ಹೆದರಲಿಲ್ಲ. ಅದನ್ನು ಮೀರಿ ಜಗದ್ವಿಖ್ಯಾತನಾಗಿ ಬೆಳೆದ. ಇಂದು ಜಗತ್ತಿನಿಂದ ಮರೆಯಾದ. ಭಯಾನಕವಾದ ರೋಗದಿಂದ ಬಳಲುತ್ತ ದೇಹದ ಸ್ವಾಧೀನವನ್ನೇ ಕಳೆದುಕೊಂಡಿದ್ದರೂ ಬುದ್ಧಿಯನ್ನು ಹಿಡಿತದಲ್ಲಿರಿಸಿಕೊಂಡು ಆಕಾಶದ ವೈಚಿತ್ರ್ಯಗಳನ್ನು ದಾಖಲಿಸುತ್ತಾ ಹೋದವ ಸ್ಟೀಫನ್ ಹಾಕಿಂಗ್!! ಸ್ಟೀಫನ್ ಹಾಕಿಂಗನ್ನು ದೈವಾಧೀನನಾದ ಎನ್ನುವಂತಿಲ್ಲ; ಆತ ದೇವರನ್ನು ನಂಬುವವನೇ ಅಲ್ಲ. ಆತ ಲೀನನಾದ ಎನ್ನಬಹುದೇನೋ? ಕಪ್ಪುಕುಹರ (Black hole) ಗಳಲ್ಲಿ ಒಂದಾಗಿಬಿಟ್ಟನೆಂದರೆ ಹೆಚ್ಚು ಆಪ್ತವಾಗಬಹುದೇನೋ?
#ಸ್ಟೀಫನ್_ಹಾಕಿಂಗ್

No comments:
Post a Comment