#Bharat_Ane_Nenu..!
ತೆಲುಗಿನ typical ಹೊಡಿಬಡಿ ಸಿನಿಮಾಗಳ ಸವಕಲು ಅನ್ನಿಸುವ ಸಿದ್ಧಸೂತ್ರದಿಂದ ಹಠಾತ್ ಬಿಡಿಸಿಕೊಂಡು ಹೊರಬಂದಂತಿರುವ ‘ಭರತ್ ಅನೇ ನೇನು’ ಶುದ್ಧ ರಾಜಕೀಯ ಚಿತ್ರ. ಈ ಕಾಲದ ಹೊಸ ರಾಜಕಾರಣದ ಮಾದರಿಯೊಂದನ್ನು ಯಾವುದೇ ಅಬ್ಬರ ಅತಿರೇಕಗಳಿಲ್ಲದೆ ತಣ್ಣಗಿನ ಸ್ವರದಲ್ಲಿ ಮಂಡಿಸಲು ಯತ್ನಿಸಿರುವ ವಿಶಿಷ್ಟ ಚಿತ್ರವಿದು. ಚಿತ್ರದ ನಾಯಕನಟ ಮುಖ್ಯಮಂತ್ರಿ ಪಟ್ಟವೇರಿದ ಮೊದಲದಿನವೇ ಹಿರಿಯ ಅಧಿಕಾರಿಗಳ ಎದುರು ‘ನನಗೆ ಈ ದೇಶದ ರಾಜಕಾರಣ, ಇಲ್ಲಿನ ಸಮಸ್ಯೆ, ಬಿಕ್ಕಟ್ಟುಗಳ ಬಗ್ಗೆ ಏನೊಂದು ಗೊತ್ತಿಲ್ಲ. But I’m a fast learner; ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ಗ್ರಹಿಸಿ ಕಲಿತುಕೊಳ್ಳುವೆ’ ಎಂದು ವಿನಯದಿಂದ ಹೇಳುತ್ತಾನೆ. ಚಿತ್ರ ಮುಗಿಯುವ ಹೊತ್ತಿಗೆ ಅದೇ ನಾಯಕನಟ ‘ಈಗ ನನಗೇ ಈ ದೇಶದ ರಾಜಕಾರಣ, ಇಲ್ಲಿನ ಬಿಕ್ಕಟ್ಟುಗಳ ಮೂಲ ಯಾವುದು ಅಂಥ ಅರ್ಥವಾಗಿದೆ’ ಎಂದು ಯಾವುದೇ ಸೋಗುಗಳಿಲ್ಲದೆ ಹೇಳುತ್ತಾನೆ.

ಆ ರಾಜಕಾರಣ, ಆ ಬಿಕ್ಕಟ್ಟುಗಳ ಮೂಲ ಯಾವುವು ಅನ್ನುವುದು ನಾಯಕನಟನೊಂದಿಗೆ ನಮಗೂ ಅಷ್ಟಿಷ್ಟಾದರೂ ಅರ್ಥವಾಗಿರುತ್ತವೆ.

No comments:
Post a Comment