Saturday, August 11, 2018

#ಕಾಲ ಬದಲಾಗಿದ್ದು ಗೊತ್ತೇ ಆಗ್ಲಿಲ್ಲ… ಆದರೆ ನೆನಪುಗಳು ಮಾತ್ರ ಇನ್ನೂ ಡಿಲೀಟ್ ಆಗಿಲ್ಲ…👣👣

   “ಮನೆ ಮಂದಿಯೆಲ್ಲಾ ಒಂದೇ ಸಾಬೂನು, ಉಪಯೋಗಿಸುತ್ತಿದ್ವಿ” ದೂರದರ್ಶನದಲ್ಲಿ ಭಾನುವಾರ ಸಂಜೆ ನಾಲ್ಕಕ್ಕೆ ಬರುತ್ತಿದ್ದ ಚಲನಚಿತ್ರ ನೋಡೋದೇ ಖುಷಿ ಶೆಟ್ರಂಗಡಿಗೆ ಚೀಟಿ ಕೊಟ್ಟು ಸಾಮಾನು ತರುತ್ತಿದ್ದೆವು ಯಾವತ್ತೋ ಒಂದು ದಿನ ಮಾಡುತ್ತಿದ್ದ ವಿಶೇಷ ತಿಂಡಿಗಳ ರುಚಿ ಈಗ ಇಲ್ಲ ಬೆಲ್ಲ ಕ್ಯಾಂಡಿ ತಿನ್ನೋದು ಯಾವಾಗಲೋ ನಿಲ್ಲಿಸಿದೆವು.

ಅಪ್ಪ ತರುತ್ತಿದ್ದ ಬಟ್ಟೆಯ ಸಂಭ್ರಮ ಇವತ್ತಿನ ಮಾಲ್ ನಲ್ಲಿ ಸಿಗುತ್ತಿಲ್ಲ ಕಾದಂಬರಿ ಓದೋರ ಒಂದು ಬಳಗವೇ ಇರುತ್ತಿತ್ತು ಊರ ಜಾತ್ರೆಗಿಂತ ದೊಡ್ಡ ಪ್ರೋಗ್ರಾಮ ಇರಲೇ ಇಲ್ಲ ಎಲ್ಲಾ ಧರ್ಮದವರು ಒಟ್ಟಿಗೆ ಹಬ್ಬ ಆಚರಿಸ್ತಾ , ಇದ್ದೆವು ಜ್ವರಕ್ಕೆ ಅಮ್ಮನ ಕಾಫಿ/ಕಷಾಯ ಸಾಕಾಗ್ತಾ ಇತ್ತು ಕಿವಿ ನೋವು, ಹೊಟ್ಟೆ ನೋವು, ಶೀತ, ಕೆಮ್ಮು, ಗಂಟಲು ನೋವು ಖಾಯಿಲೆ ಅಂದ್ರೆ ಇವಷ್ಟೇ ಆಗಿತ್ತು ಸಕ್ಕರೆ ಖಾಯಿಲೆ ಆವಾಗ ಶ್ರೀಮಂತರಿಗೆ ಮಾತ್ರ ಬಿಲ್ಡಿಂಗಿಗಿಂತ ಮರಗಳೇ ಜಾಸ್ತಿ ಇದ್ದವು.

ಲಗೋರಿ, ಮರಕೋತಿ ಆಟ,ಚಿನ್ನಿದಾಂಡು ಕ್ರಿಕೆಟ್ ಹುಡುಗರಿಗೆ ಕುಂಟಾಬಿಲ್ಲೆ, ಕೊಕೊ,ಚೌಕಾಬರ, ಹುಡುಗಿಯರ ಆಟ ಆಗಿತ್ತು* ಭೂತದ ಮನೆ, ಭೂತ ಬಂಗ್ಲೆ ಊರಿಗೊಂದು ಇರುತ್ತಿತ್ತು ಸಂಜೆ ಏಳಕ್ಕೆ ಎಲ್ಲಾ ಮನೆಲಿ ಇರುತ್ತಿದ್ವಿ ಆದಿತ್ಯವಾರ ಗಂಡುಮಕ್ಕಳು ಕೂದಲು ಕಟ್ಟಿಂಗೆ ಲೈನ್ ಕಾಯ್ತಾ ಇದ್ದರು ಹುಡುಗೀರಿಗೆ ಅಮ್ಮನದ್ದೆ ಬ್ಯೂಟಿ ಪಾರ್ಲರ್ ದೊಡ್ಡೋರ ಅಂಗಿ ಸಣ್ಣವರಿಗೆ ಬಳುವಳಿಯಾಗಿ ಬರುತ್ತಿತ್ತು ಮಳೆ ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಬರುವಾಗ ಜೋರಾಗಿ ಹೊಡಿತ್ತಿತ್ತು ಆಮೇಲೆ ದಿನ ಇಡೀ ಜಿಟಿಜಿಟಿ ಸುರಿತಾ ಇತ್ತು.

ಮಗ್ಗಿ ಹೇಳೋದೇ ದೊಡ್ಡ ಅಸೈನ್ಮೆಂಟೂ ಗುಬ್ಬಿ ಮನೆ ಅಂಗಳದಲ್ಲೇ, ಸಂಜೆ ಆದ್ರೆ ಬೇರೆ ಬೇರೆ ಸದ್ದಿನ ಹಕ್ಕಿಗಳು ಟ್ರಾಫಿಕ್ ಜಾಮ್ ಕೇಳಿ ಗೊತ್ತಿತ್ತು ನೋಡಿ ಗೊತ್ತಿರಲಿಲ್ಲ ತರಕಾರಿ ತರೋದಕ್ಕೆ ಕೈ ಚೀಲ ನಾವೇ ತಗೊಂಡು ಹೋಗ್ತಾ ಇದ್ದೆವು ಯಾರಿಗಾದರು ನೋವಾದರೆ ನಮಗೂ ದುಃಖ ಆಗ್ತಾ ಇತ್ತು, ಸ್ಮೈಲಿ/ಇಮೋಜಿ ಕಳುಹಿಸುತ್ತಾ ಇರ್ಲಿಲ್ಲ ಮನೆಮಂದಿ ಒಟ್ಟಿಗೆ ಕೂತು ಮಾತಾಡೋದೆ ವಾಟ್ಸಪ್ ಗ್ರೂಪ್ ಆಗಿತ್ತು ಫೋಟೊ ತೆಗೆದ್ರೆ ಕ್ಲೀನ್ ಆಗಿ ಬರೋಕೆ ಕಾಯ್ತಾ ಇದ್ದೆವು.

ಪೇಪರಿನಲ್ಲಿ ಅಪಘಾತದಂಥಾ ಸುದ್ದಿ ಬಂದ್ರೆ ಮರುಗುತ್ತಿದ್ದೆವು. ಒಬ್ರು ಯಾರೋ ಫೇಸ್ ಬುಕ್ ಥರಾ ಎಲ್ಲಾ ವಿಷಯ ಮನೆಗೆ ಬಂದು ಅಪ್ಲೋಡ್ ಮಾಡ್ತಾ ಇದ್ದರು/ ಅದೇ ಮನೆಯಿಂದ ವಿಷಯ ಡೌನ್ಲೋಡ್ ಕೂಡಾ ಮಾಡ್ತಾ ಇದ್ರು ಅಂಗಡಿ ಶೆಟ್ರಿಗೆ, ಊರ ಡಾಕ್ಟ್ರಿಗೆ, ಶಾಲಾ ಮಾಸ್ತರಿಗೆ ಮನೆಯವರೆಲ್ಲರ ಪರಿಚಯ ಮತ್ತು ವಿಷಯ ತಿಳಿದಿತ್ತು...
ಬದಲಾದ ನಮ್ಮ ಜೀವನ ಶೈಲಿಯಲ್ಲಿ ನಾವೂ ಮರೆತಂತಹ ಬಾಲ್ಯದ ಸುಮಧುರ ಘಟನೆಗಳು...!!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...