ಬೆಂಗಳೂರಿನ ಬಿಡುವಿಲ್ಲದ ಕೆಲಸದ ನಡುವೆಯು ನೋಡಿದ ಚಿತ್ರ
ಬರಿ ಚಿತ್ರದ ಹೆಸರು ಮತ್ತು Trailer ನೋಡಿ ಚಿತ್ರ ನೋಡುವ ಕಾತುರದಿಂದ ಹೋದವನು
ಚಿತ್ರದ ಆರಂಭದಲ್ಲಿಯೆ ಬರಿಯ ಹೊಸ ಹೊಸ ಮುಖಗಳನ್ನು ಕಂಡಾಗ ನಿಜವಾಗಿಯೂ ಏನೋ ಹೊಸ ಪ್ರಯೋಗವಿದೆ ಎಂದು ಎನಿಸುವ ಚಿತ್ರ,
ಹಾಗೇ ಚಿತ್ರವನ್ನು ನೋಡುತ್ತ ನೋಡುತ್ತ ಪ್ರತಿ ಪಾತ್ರವು ಸಹ ಅದ್ಬುತ ಎನಿಸಿಬಿಡುತ್ತದೆ,
ಚಿತ್ರದುರ್ಗದ ಗ್ರಾಮ್ಯದ ಸೊಗಡಿನ ಹೂ ಮಾರುವ ಹುಡುಗಿಗೆ ಬಣ್ಣದ ಜಗತ್ತಿನಲಿ ಬೆಳಗುವ ಆಸೆ,
ಮಂಗಳೂರಿನ ಮುಸ್ಲಿಂ ಯುವಕನೊಬ್ಬನ ಸುತ್ತ ಹುಟ್ಟಿ ಹರಡುವ ಕಥೆ,
ಅಶೋಕವನದ ಸೀತೆಯನ್ನೆ ರೆಪ್ಲಿಕಾ ಮಾಡಿ ತೋರಿಸಿರುವ ಪದ್ಮ ( ಹರಿಪ್ರಿಯಾ) ಪಾತ್ರಧಾರಿಯು ಪ್ರತಿ ಬಾರಿ ತೆರೆಯ ಮೇಲೆ ಕಂಡಾಗಲು ಸಹ ಒಂದೊಂದು ದಿಕ್ಕಿನೆಡೆಗೆ ತೆರೆದುಕೊಳ್ಳುವ ಕಥೆ,
ಸುಚಿಂದ್ರ ಪ್ರಸಾದ್ ಮೊದಲ ಬಾರಿಗೆ ಇಂತಹ ಒಂದು ಪಾತ್ರದಲ್ಲಿ ಅಭಿನಯ,
ಅಚ್ಯುತ್ ರಾವ್ ಎಂದಿನಂತೆ ಪಾತ್ರದೊಳಗೆ ಪರಕಾಯ ಪ್ರವೇಶ,
ಹರಿಪ್ರಿಯ ನಟನೆಯನ್ನು ನೋಡಿದರೆ, ಅವರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತುವಿನ ಸೂಕ್ಷ್ಮತೆ ಅಬ್ಬ ಖಂಡಿತ ಈಕೆ ಕನ್ನಡದಲ್ಲಿ ಮಿನುಗುತಾರೆ ಕಲ್ಪಾನ ರವರನ್ನು ಮೀರಿಸುವ ಅಭಿನಯವನ್ನು ಈ ಚಿತ್ರದಲ್ಲಿ ನಿಡಿದ್ದಾರೆ,
ತುಂಬಾ ಸರಳವಾಗಿ ಮನಮುಟ್ಟುವುದು ನಾಯಕನಟನ ಪಾತ್ರ ಶಂಕರ/ ಶಬ್ಬೀರ್,
ಚೋಟು ಪಾತ್ರದಾರಿಯ ಆಯ್ಕೆ ನಿಜವಾಗಿಯೂ ಶ್ಲಾಘನೀಯ
ಚಿತ್ರದುರ್ಗದ ಹೆಸರಿನಲ್ಲೆ ಅದೊಂದು ತಾಕತ್ ಇದೆ
ಅದನ್ನು ವಿಭಿನ್ನವಾಗಿ ತೋರಿಸಿದಲ್ಲದೆ,
ಎಲ್ಲಿಯು ಸಹ ಸಭ್ಯತೆಯ ಎಲ್ಲೆಮೀರದೆ ದೃಶ್ಯಗಳನ್ನು ಚಿತ್ರೀಕರಿಸಿದ ರೀತಿ ಒಮ್ಮೆಗೆ ಪುಟ್ಟಣ್ಣ ಕಣಗಾಲ್ ರವರ ನೆನಪಾಗಿ ಬಿಡುತ್ತದೆ ಒಮ್ಮೆ ಚಿತ್ರ ನೋಡಿ ಇದರ ತೀವ್ರತೆ ಅರ್ಥ ಆಗತ್ತೆ,
ಉಸಿರು ಬಿಗಿ ಹಿಡಿಸುವ ಮಧ್ಯಂತರ,
ಎದೆಯ ಬಡಿತ ಜೋರು ಮಾಡುವ ಕ್ಲೈಮ್ಯಾಕ್ಸ್ ನ ಸೂಜಿದಾರ-2 ಎಂಬ ಎರಡನೇ ಅಧ್ಯಾಯದ ಆರಂಭ ಮತ್ತು ನಿರೀಕ್ಷೆ,
ಪ್ರೇಕ್ಷಕರಿಗೆ ಏನನ್ನು ಹೇಳಲು ಹೊರಟಿದ್ದೀರೋ ಅದನ್ನು ಹೇಳಿ ಗೆದ್ದಿದ್ದಾರೆ ನಿರ್ದೇಶಕರು..
ಚಿತ್ರದ ಜೀವಾಳವೆ ಕಥೆ ಮತ್ತು ಪಾತ್ರಗಳ ಆಯ್ಕೆ,
ಪ್ರತಿ ಪಾತ್ರಗಳಿಗೂ ಕೊಡುವ ಪ್ರಾಧಾನ್ಯತೆ ಮತ್ತು ಸಂಭಾಷಣೆ ಎಲ್ಲವೂ ಸರಳ,
ಕ್ಯಾಮೇರಾ ಕೈಚಳಕವೇ ಚಿತ್ರದ ನೈಜತೆಗೆ ಕನ್ನಡಿ,
ಮುಖ್ಯವಾಗಿ ಸ್ತ್ರೀ ಸಂವೇದನೆಯನ್ನ,
ಗಂಡಿನ ಮನಸಿನ ತಳಮಳವನ್ನ,
ಬದುಕು ಮತ್ತು ಧರ್ಮದ ನಡುವಿನ ಅಂತವನ್ನ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರಾದ ಮೌನೇಶ್ ಬಡಿಗೇರ್,
ಯಾರೆಲ್ಲ ನೋಡಿಲ್ಲ ಖಂಡಿತ ಒಮ್ಮೆ ನೋಡಿ,
ಹೆಸರಿಗೆ ತಕ್ಕಂತೆ ಇಲ್ಲಿ ಕಥೆ ಮತ್ತು ಪಾತ್ರದಾರಿಗಳೇ
#ಸೂಜಿಮತ್ತುದಾರ

No comments:
Post a Comment