#ನನ್ನದಲ್ಲದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ ಅನ್ನಿಸೋಕೆ ಶುರು ಆಗಿದೆ.
Love, sex, money, life, Relationship ಸಂಬಂಧ ಇವಿಷ್ಟರಲ್ಲಿ ಯಾವುದೊಂದು ನಮ್ಮ ದೌರ್ಬಲ್ಯವಾದರೂ, ಹುಟ್ಟು ಇರದ ದೋಣಿಯೊಳಗಿನ ನಾವಿಕನ ಬದುಕು. ಪ್ರವಾಹ ಸೆಳೆದೆಡೆ ದೋಣಿ ಜೊತೆ ಹೋಗುತ್ತಿರಬೇಕು ಅಡಿಗೊಮ್ಮೆ ಅದುರುತ್ತ, ದೋಣಿ ಮಗುಚುವ, ನೀರು ಕುಡಿಯುವ ಭಯದಲ್ಲೇ.
ಭಾವನೆಗಳ ಮೂಟೆ ಕಟ್ಟಿ ಕಾಮನೆಗಳ ಉಸಿರು ಕಟ್ಟಿಸಿ ನಾನೆಂಬ ನನ್ನೊಳಗೆ ಬದುಕ ಕಲಿತು ಬಿಟ್ಟರೆ ಬದುಕಿದ್ದಷ್ಟು ದಿನ ಸ್ಪೀಡ್ ಬೋಟ್ ಪಯಣ, ಅಲೆಗೆದುರಾಗಿ, ಪ್ರವಾಹಕ್ಕೆ ಸವಾಲಾಗಿ ಮನ ಸೆಳೆದೆಡೆ ಹೋಗುತ್ತಿರಬಹುದು
ನಾನೆಂಬ ನನ್ನ ನಂಬಿ
ಪ್ರಪಂಚ ಸರಿ ಇಲ್ಲ ಎಂದು ಗೊಣಗುತ್ತ, ಪ್ರಪಂಚವ ತೆಗಳುತ್ತಲೇ ಬದುಕುವ ತೀರ ಸಾಮಾನ್ಯ ಬದುಕು ಬದುಕಲು ನಾ ಮಾನಸಿಕವಾಗಿ ಸಾಮಾನ್ಯನಲ್ಲ.
ನಾ ನನ್ನದೇ ಪ್ರಪಂಚ ಸೃಷ್ಟಿಸಿಕೊಂಡಿದ್ದೇನೆ ನನಗೆ ಬೇಕಾದ ಹಾಗೆ ಅಲ್ಲಿ ಎಲ್ಲವೂ ಇದೆ ನನಗೆ ಬೇಕಾದದ್ದು...
ಪ್ರಪಂಚ ಮತ್ತು ಬದುಕು ಎರಡು ಸುಂದರ...........
ಎಲ್ಲರೂ ಅವರವರ ಖುಷಿಯನ್ನು ಅವರವರೇ ಹುಡುಕಿಕೊಂಡರೆ ಪ್ರಪಂಚದ ಎಲ್ಲರೂ ಖುಷಿಯಾಗಿರ್ತಾರೆ. ಅವ್ರ ಖುಷಿಯನ್ನು ಅವರೇ ಹುಡುಕಿಕೊಳ್ಳೋದು ಸುಲಭ ಕಾರಣ ತನಗೇನು ಬೇಕು ಅನ್ನುವುದು ಆತನಿಗೆ ಚೆನ್ನಾಗಿ ಗೊತ್ತಿರತ್ತೆ .ಆದರೆ ನಾವಿಲ್ಲಿ ನಿಮ್ಮ ಖುಷಿಗೆನಾನೇನು ಮಾಡಬೇಕು ಮತ್ತು ನನ್ನ ಖುಷಿಗೆ ನೀವೇನು ಮಾಡಬೇಕು ಅನ್ನುವ ಹುಡುಕಾಟದಲ್ಲೇ ಜೀವನ ಕಳೆಯುತ್ತಿದ್ದೇವೆ ಖುಷಿ ಮರೀಚಿಕೆ ಆಗಿದೆ ಅಷ್ಟೇ..!!
-ಮತ್ತೆ ಸಿಗುವಾ ನಾಳೆಗಳ್ಳಿದ್ದರೆ
.jpg)
No comments:
Post a Comment