Sunday, February 18, 2018

#ಪ್ರಕೃತಿ_ಪಾಠ_ಇದುವೇ_ನೋಡ_ಎಂಬ_ಮರ್ಮ_ಸಿಕ್ಕಿತು...!!


          #ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾಡಿ ಹಾಡಿ ಕುಣಿಯುತಿತ್ತು, ಸಾಕು ಸಾಕು ನಿಲ್ಲು ಎನಲು ನನ್ನ ನೋಡಿ ನಕ್ಕಿತು..   ಮರದ ತುಂಬ ಫಲಗಳಿರಲು ಬಗ್ಗಿ ತಾ ನಿಂತಿರಲು ಭಾರವೇ ಫಲಗಳೆನಲು ನನ್ನ ನೋಡಿ ನಕ್ಕಿತು..  ನದಿಯಲೊಂದು ಪುಟ್ಟ ಮೀನು ಪ್ರವಾಹದೆದುರು ಈಜುತಿರಲು ಸಹಕರಿಸಲೇ ನಾನು ಎನಲು ನನ್ನ ನೋಡಿ ನಕ್ಕಿತು..ಮರದ ಬುಡದಿ ಬಳ್ಳಿಯೊಂದು ಮರವನ್ನೇ ಸುತ್ತುತಿರಲು ಸಾಕು ಸುತ್ತಬೇಡ ಎನಲು ನನ್ನ ನೋಡಿ ನಕ್ಕಿತು, ನಿನ್ನ ಕೆಲಸ ಮರೆಯಬೇಡ ಪರರ ಗೊಡವೆ ನಿನಗೆ ಬೇಡ ಪ್ರಕೃತಿ ಪಾಠ ಇದುವೇ ನೋಡ ಎಂಬ ಮರ್ಮ ಸಿಕ್ಕಿತು..ನಾನು ಅಂದು ತಿಳಿದುಕೊಂಡೆ ಹೊಸ ಬದುಕ ಕಂಡುಕೊಂಡೆ ಮೂರ್ಕ ತನವ ತಿದ್ದಿಕೊಂಡೆ ಹೊಸ ದಾರಿ ಸಿಕ್ಕಿತು..!!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...