Tuesday, May 21, 2019

#ಯಾಂತ್ರಿಕ ಜೀವನದ ಯಾತನೆಗಳು...!


ಕಂಬಿಗಳಿರದ ಜೈಲಿನಲ್ಲಿ ಕೂತಂತೆ ಸಾಲು ಸಾಲು ಕ್ಯೂಬಿಕಲ್ ಗಳ ನಡುವೆ  ಒಬ್ಬನೇ ಕೂತಿದ್ದೇನೆ ಅನ್ನೋ ಅನುಭವ. US ಪ್ರಾಜೆಕ್ಟ್ ಗೆ ಹಗಲು ರಾತ್ರಿ ದುಡಿದು ನನ್ನನ್ನೇ ಮರೆತಿದ್ದೇನೆ, ಇನ್ನೂ ರಾತ್ರಿ ಘಂಟೆ 11 ಆದರೂ ಮನೆ ಹೋಗುವುದನ್ನು ಮರೆತಿರೋದರಲ್ಲಿ ಅಚ್ಚರಿ ಇಲ್ಲ.

ಮ್ಯಾನೇಜರ್ ಗೆ ಹೆದರದವನು Silk Board Traffic'ಗೆ ಹೆದರಿ ಬೆಳಿಗ್ಗೆ 7 ಘಂಟೆಗೆ ಆಫೀಸ್ಸಿಗೆ ಓಡಿ ಬರುವುದು. ದಿನವಿಡೀ ಸಾಕಷ್ಟು ಕರೆಗಳು, ಮೀಟಿಂಗ್ಸ್ ಗಳು ರಕ್ತವನ್ನು ಹೀರಿವೆ. ಡೆಸ್ಕಿನ ಮುಂದೆ ‘ಪ್ಯಾಟ್ ಆನ್ ದಿ ಬ್ಯಾಕ್’ ಎಂಬ ಜುಜುಬಿ ಅವಾರ್ಡ್ ಹೆಣವಾಗಿ ಬಿದ್ದಿದೆ. ಕ್ಷಣಕ್ಷಣಕ್ಕೂ ಮೊಬೈಲ್ನಲ್ಲಿ ಒಂದಿಷ್ಟು ವಾಟ್ಸಪ್ಪ್ ಮೆಸೇಜ್ ಗಳು ಹರಿದಾಡುತ್ತಿವೆಯಾದರು  ಮೊಬೈಲಿನ ನೋಟಿಫಿಕೇಷನ್ಸ್ ಗಳ ಬೆಳಕು ಗಮನ ಕೆಡಿಸಲಿಲ್ಲ. ಕೊನೆಗೂ ಘಂಟೆ  12 ಕ್ಕೆ ಕೆಲಸ ಮುಗಿಯುತ್ತೆ. ಮನೆಗೆ ಕಾಲ್ ಮಾಡಿ ಆಫೀಸ್ನಿಂದ ಬಿಡುವುದಾಗಿ  ಉತ್ತರಬರುವುದರಲ್ಲಿ ಕಾಲ್ ಕಟ್ ಆಗಿರುತ್ತೆ.

UBER ಕ್ಯಾಬ್ ಬುಕ್ ಮಾಡಿದಾಗ ಕಾರು ಬರಲು ಇನ್ನೂ 10 ನಿಮಿಷ ತೋರಿಸುತ್ತಿರುತ್ತದೆ.

ಅಷ್ಟರಲ್ಲಿ ವಾಟ್ಸಾಪ್ ಓಪನ್ ಮಾಡಿ ನೋಡಿದಾಗ ಮುಖದಲ್ಲಿ ಹತಾಶೆಯ ಭಾವನೆ ಮೂಡಲು ಪ್ರಾರಂಭವಾಗುತ್ತದೆ….ವಾಟ್ಸಪ್ಪ್ ಗುಂಪೊಂದರಲ್ಲಿ ಸಾಲು ಸಾಲು congratulations ಎಂಬ ಉದ್ಘಾರಗಳು..! ತನ್ನ ೧೫ ವರ್ಷದ ಸ್ನೇಹಿತ ರೋಹಿತ್ ಎರಡು ತಿಂಗಳಿನಿಂದಷ್ಟೇ ತನ್ನ ಕ್ಯೂಬಿಕಲ್ ಕೆಲಸ ಬಿಟ್ಟು ಅವನು ಹುಟ್ಟುಹಾಕಿದ್ದ ಮ್ಯೂಸಿಕ್ ಬ್ಯಾಂಡ್ ಇಂದು ನಗರದ ಟಾಪ್ ೫ ಅಲ್ಲಿ ಗುರುತಿಸಿಕೊಂಡಿದೆ..! ಹೃದಯದಿಂದ ಬರದಿದ್ದರೂ hearty congratulations ಅಂತ ಟೈಪ್ ಮಾಡಿ ಸೆಂಡ್ ಮಾಡುವುದರೊಳಗೆ , ಕ್ಯಾಬ್ ಡ್ರೈವರ್ ಕರೆ ಮಾಡುತ್ತಾನೆ.
ಡ್ರೈವರ್ಗೆ ತನ್ನ ಆಫೀಸಿನ ಅಡ್ದ್ರೆಸ್ ಹೇಳಿ ಬೇಗ ಬರಲು ಹೇಳಿ.

ಒಂದು ಕ್ಷಣ ಸುತ್ತ ಮುತ್ತ ನೋಡಿದಾಗ ಆಫೀಸಿನಲ್ಲಿ ಯಾರು ಇಲ್ಲ. ಯಾರು ಇಲ್ಲದ ಆಫೀಸಿನ ಕ್ಯೂಬಿಕಲ್ ಗಳು ಸ್ಮಶಾನದಲ್ಲಿ ಮಲಗಿರುವ ಸಾಲು ಸಾಲು ಗೋರಿಗಳಂತೆ ಕಾಣುತ್ತಿವೆ.
ನನ್ನ ಮೊಬೈಲ್  screensaver  ಅಲ್ಲಿ  "stay hungry stay foolish " ಸಾಲುಗಳನ್ನು ಸ್ಟೀವ್ ಜಾಬ್ಸ್  ನನ್ನನ್ನೇ ನೋಡಿ ಹೇಳಿದಂತೆ  ಭಾಸವಾಗುತ್ತಿದೆ.!!

ಯಾವುದೊ ದೇಶದ ಯಾವುದೊ  ಕ್ಲೈಂಟ್ ಗೆ ಹಗಲು ರಾತ್ರಿ ನಾನೇಕೆ ದುಡಿಯುತ್ತಿದ್ದೇನೆ ?
ಬರವಣಿಗೆಯಲ್ಲಿ ಇಷ್ಟವಿದ್ದ ನನಗೆ ನನ್ನ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಹಾಕಿ ಅದೆಷ್ಟೋ, ದಿನಗಳಾಯ್ತು!
ತೇಜಸ್ವಿ ಪುಸ್ತಕವೆಂದರೆ ರಾತ್ರಿವಿಡೀ ಓದುತಿದ್ದ ನಾನು, ಇಂದು ಮನೆಯಲ್ಲಿ ಪುಸ್ತಕಗಳ ವಾಸನೆಕೂಡ ಇಲ್ಲ ..ನನ್ನ ಬರವಣಿಗೆ ಮೆಚ್ಚಿ ಕಾಲೇಜಿನಲ್ಲಿ ಪ್ರಶಸ್ತಿ ಬಂದಾಗ ಮ್ಯೂಸಿಕ್ ನಲ್ಲಿ ಪ್ರಶಸ್ತಿ ಗಳಿಸಿದ್ದ ರೋಹಿತ್ ಕೂಡ ನನ್ನ ಬರವಣಿಗೆ ಬಗ್ಗೆ ಹೊಗಳಿದ್ದ.. !
ಸಿನಿಮಾ ವೆಂದರೆ ಕಾಲೇಜಿಗೆ ರಜೆ ಹಾಕಿ ಇಷ್ಟದ ಎಲ್ಲಾ ಸಿನೆಮಾವನ್ನು ನೋಡುತ್ತಿದ್ದಾಗ ನನ್ನಲ್ಲಿ ಒಬ್ಬ ಡೈರೆಕ್ಟರ್ ಸದ್ದಿಲ್ಲದೇ ಹುಟ್ಟುತ್ತಿದ್ದ!

ಹೌದು ! ನಾನು ನಾನಾಗಿ ಉಳಿದಿಲ್ಲ!!
ಒಂದು ಕವಿತೆ ಬರೆಯೋದ್ರಲ್ಲಿರೋ ಸುಖ ಒಂದು ಪ್ರೋಗ್ರಾಮ್ ಬರೆಯೋದರಲ್ಲಿ ಸಿಗುತ್ತಿಲ್ಲ.
ಗೆಳೆಯರ ಜೊತೆ ಸಿನಿಮಾ ನೋಡಿ ತೆರೆಹಿಂದಿನ ಕೆಲಸದ ಬಗ್ಗೆ ಮಾತನಾಡುವದ್ರಲ್ಲಿರೋ ಸುಖ ಘಂಟೆಗಟ್ಟಲೆ ನಡೆಯುವ ಕ್ಲೈಂಟ್ ಮೀಟಿಂಗ್ನಲ್ಲಿ ಸಿಗುತ್ತಿಲ್ಲ ಅಷ್ಟೊರಳಗೆ ಡ್ರೈವರ್ ಕಾಲ್ ಮಾಡಿ ತಾನು ಬಂದಿರೋದಾಗಿ ಹೇಳುತ್ತಾನೆ.

ನನ್ನ ಲ್ಯಾಪ್ಟಾಪ್ ನ ಡೆಸ್ಕ್ಟಾಪ್ ಮೇಲೆ ಯಾವಾಗಲೂ ಇರುವ ‘Passion’ ಎಂಬ ಫೋಲ್ಡರ್ ಅನ್ನು ಬಲು ತೀಕ್ಷ್ಣವಾಗಿ ನೋಡುತ್ತಿದ್ದಾಗ ಬರೆದ ಎಲ್ಲ ಅಂಕಣಗಳು, ಕವಿತೆಗಳು, ಕಥೆಗಳು ಅಲ್ಲದೆ ಶುರುಮಾಡಬೇಕೆಂದು ಕೊಳ್ಳುತ್ತಿದ್ದ ಅದೆಷ್ಟೋ IDEA's ನ ರೂಪರೇಷೆಗಳು ಆ Folder ತುಂಬಿಕೊಂಡಿವೆ..

ಎಡಗೈನಿಂದ ಮತ್ತೆ ಡ್ರೈವರ್ಗೆ ಕಾಲ್ ಮಾಡಿ ಬುಕಿಂಗ್ ಕ್ಯಾನ್ಸಲ್ ಮಾಡುವುದಾಗಿ ಹೇಳಿ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದೆ .
ಬಲಗೈನಲ್ಲಿದ್ದ ಮೌಸಿನ ಕರ್ಸರ ಅನ್ನು ‘Passion’ ಫೋಲ್ಡರ್ ಮೇಲೆ ಕ್ಲಿಕ್ ಮಾಡಿ ಓಪನ್ ಮಾಡಿ ಏನೋ ಮಾಡಬೇಕುನ್ನುವ ಹಂಬಲದಲ್ಲಿ ಮತ್ತದೇ ಯಾಂತ್ರಿಕ ಜೀವನದ ಜಂಜಾಟದಲ್ಲಿ ಮುಳುಗಿ ಹೋಗಿರುವುದೇ ಗೊತ್ತಾಗಲಿಲ್ಲ ….!!!!

2 comments:

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...