ಕಾಲ ಎಲ್ಲರನ್ನೂ ಎಲ್ಲವನ್ನೂ ಬದಲಿಸುತ್ತೆ ಅಂತಾರೆ, ಅದೇನೇ ಇರಲಿ, ನಾವು-ನೀವೆಲ್ಲರೂ ಬದಲಾಗಿರುವುದಂತೂ ಸತ್ಯ. ನಾನಂತೂ ಹೈ-ಸ್ಕೂಲ್ ಅಥವಾ PUC ಲಿ ಇದ್ದ ಹಾಗೆ ಈಗ ಇಲ್ಲ…ನೀವೂ ಬದಲಾಗಿದ್ದೀರಿ ಅಂತ ಗೊತ್ತು. ನಾನೇನು ಬದಲಾಗಿಲ್ಲ ಅಂತ ಮಾತ್ರ ಹೇಳ್ಬೇಡಿ…ಕಡೇ ಪಕ್ಷ ಉದ್ದ ಅಗಲ ಆದ್ರೂ ಆಗಿದ್ದೀರಿ ತಾನೆ..ಇದೇ ತಾನೇ ಬದಲಾವಣೆ 🤣
ಈ ವಿಷಯ ಬರೀಬೇಕು ಅಂತ ಆಲೋಚನೆ ಬಂದಿದ್ದೆ ಬಾಲ್ಯದ ಗೆಳೆಯನ ಮದುವೇಗೆ ಹೋಗಿದ್ದಾಗ
ಅವತ್ತು ತುಂಬಾ ವರ್ಷಗಳಾದ ಮೇಲೆ High-School/PUC ಗೆಳೆಯರನ್ನ ನೋಡಿದೆ. ಕೆಲವೊಂದು ವೈಯಕ್ತಿಕ ಕಾರಣಗಳಿಗೆ ಬದುಕಿನ ಅನಿವಾರ್ಯತೆ ನನ್ನ ಬ್ಯುಸಿ ಅನ್ನಾಗಿಸಿ ಇವರುಗಳ ಜೊತೆ ಭೇಟಿ ಅಥವಾ ಹೆಚ್ಚು ಮಾತನಾಡಿರಲಿಲ್ಲ. ಆದರೆ ಭೇಟಿ ಆದವರಲ್ಲಿ ಮಾಗಿ, ಎಮ್ಮಿ(ಪ್ರೀತಿಯಿಂದ ಕರೆಯೋದು), ಮುಸ್ತಾಫಾ ಮತ್ತು ಸಚಿನ್ ಮಾತ್ರ ೫-೬ ವರ್ಷ ಹಿಂದೆ ಹೇಗಿದ್ದರೋ ಇನ್ನು ಹಾಗೇನೇ ಅನ್ನೋ ತರ ಅದೇ ಮುಗ್ದತೆ... ಮಾಗಿ ಅಲ್ಲಿ ಮುಗ್ದತೆ ಅನ್ನೊದೇ ತಪ್ಪು🤣...ತುಂಟಾಟ ಅಂತ ಅನ್ನಬಹುದು...ಮಾಗಿ ಜೊತೆ ಅಷ್ಟು ಸಮಯ ಕಲಿಯದೇ ಹೋದ್ರು ಶಾರ್ಟ್ ಟೈಮ್ ಅಲ್ಲೇ ನನಗನಿಸಿದ್ದು ಅವನಿನ್ನೂ ಹಳೆಯ ಮಾಗಿಯೇ ಅಂತ, ಅದು ಖುಷಿ ಕೊಟ್ಟ ವಿಚಾರ... ತುಂಬಾ ವರ್ಷ ಕನೆಕ್ಟ್ ಇಲ್ಲದೆ ಹೋದ್ರು ಕೂಡಾ PUC/High-School ಲಿ ಹೇಗ್ ಇದ್ದನೋ ಅದೇ ಅನುಭವ... It's Just Took 1 Min 2 Connect ಅಂತ ಹೇಳಬಹುದು.
ಹೆಚ್ಚು ಸಮಯ ಸಿಕ್ಕಿದ್ದು ಎಮ್ಮಿ ಮತ್ತು ಮುಸ್ತಾಫಾ ಜೊತೆ... ೧೦೦% ನನಗೆ ಅವರು ೫-೬ ವರ್ಷ ಹಿಂದೆ ಹೇಗಿದ್ರೋ ಅದೇ ವ್ಯಕ್ತಿತ್ವ ಅದೇ ಮುಗ್ದತೆ ಅದೇ ಪ್ಯೂರಿಟಿ ಅಂತ ಅನ್ನಸಿದ್ದು.
ಒಂದು ಕಡೆ ತುಂಬಾ ವರ್ಷಗಳಿಂದ ನೋಡದ ಬಾಲ್ಯದ ಗೆಳೆಯರ ಜೊತೆ ಕೆಲ ಸಮಯ ಕಳೆದ ಖುಷಿ ಇನ್ನೊಂದು ಕಡೆ ಮದುವೆ ಆಗಿ ಇನ್ನೊಂದು ವಿಕೆಟ್ ಬಿತ್ತು ಅನ್ನೋ ಬೇಜಾರು... ಅವನ ಮದುವೆ ವಿಷಯ ಗೊತ್ತಾಗಿದ್ದೇ ಮದುವೆಗೆ ಬಾ ಅಂತ ಕಾಲ್ ಮಾಡಿದಾಗ ಅವನ ಲೈಫ್ ನಲ್ಲಿ ಏನಾಗತಿದೆ ನಂಗೆ ಅಪ್ಡೇಟ್ ಇಲ್ಲ... ಜೀವನದಲ್ಲಿ ಬರುವವರು ಒಂದಿಲ್ಲೊಂದು ಕಾರಣಕ್ಕಾಗಿಯೆ ಬಂದಿರುತ್ತಾರೆ ಮದುವೆ ಯು ಹಾಗೆಯೇ
ಆದರೂ ಮದುವೆ ಬಗ್ಗೆ ನನ್ನ ಒಪೀನಿಯನ್ ಹೇಳೇ ಬೇಕು.. ನನ್ನ ಪ್ರಕಾರ
"ಮದುವೆ ಅನ್ನೋದು ಒಂಥರಾ ಹಬ್ಬ ಇದ್ದಂಗೆ ತನ್ನನ್ನು ಮತ್ತು ತನ್ನವರನ್ನು ನಿಯಂತ್ರಿಸುವ ತಾಕತ್ತು ಮತ್ತು ಕಲೆ ಇರೋನಿಗೆ
ಮದ್ವೆ ಅನ್ನೋದು ಮಾರಿ ಹಬ್ಬ ಇದ್ದಂಗೆ ಮೇಲಿನದು ತಿಳಿಯದವನಿಗೆ ಹಬ್ಬದಲ್ಲಿನ ಕುರಿಯಂತೆ "
ನನ್ನ ವಯಕ್ತಿಕ ಜೀವನದಲ್ಲೂ ಕೂಡಾ ತುಂಬಾ ಗೆಳೆಯರ ಜೊತೆ ಕೆಲವೊಂದು ಸನ್ನಿವೇಶದಲ್ಲಿ Just for Time being Distance-Maintain ಮಾಡಿದೀನಿ ಅದು ನನ್ನ ಬದುಕಿನಲ್ಲಾದ ಕೆಲವೊಂದು ಅನಿರೀಕ್ಷಿತ ಘಟನೆಗಳಿಗೆ ಹೊರತು ಯಾರನ್ನು Avoid ಮಾಡಬೇಕು ಅಂತ ಅಲ್ಲ.... Basically ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಾದಾಗ ನಾನು ಫ್ರೀಜ್ ಆಗತೀನಿ ಆ ಟೈಮ್ಅಲ್ಲಿ ನಂಗೆ ನನ್ನದೇ ಅದ Space ಬೇಕು ಅಷ್ಟೇ.. ಅದನ್ನ ಬಿಟ್ಟು ಇನ್ನೇನು ಇಲ್ಲಾ
"ಸರಿ ತಪ್ಪುಗಳಾಚೆ ಒಂದು ಬಯಲಿದೆ ನಾನು ನಿನಗಲ್ಲಿ ಸಿಗುತ್ತೇನೆ..!"
ಸಮಯ ಕಳೆದಂತೆ ನಮ್ಮ ಜೀವನದಲ್ಲಿ ಅದೆಷ್ಟು ಜನ ಬಂದು ಹೋಗ್ತಾರೆ. ಕೆಲವರು ಬದುಕನ್ನು ಬದಲಾಯಿಸುತ್ತಾರೆ ಅದು ಒಳ್ಳೆಯದಕ್ಕೊ ಕೆಟ್ಟದಕ್ಕೊ, ಒಟ್ಟಾರೆ ಬದಲಾವಣೆಗೆ ಅವರು ಕಾರಣರಾಗಿರುತ್ತಾರೆ. ಇನ್ನೂ ಕೆಲವರು ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟು ಮರೆಯಾಗುತ್ತಾರೆ. ನಮ್ಮ ಜೀವನ ಪೂರ್ತಿ ಇರಬೇಕೆಂದುಕೊಂಡವರು ಅದೇನೋ ಸಮಸ್ಯೆಗಳಿಂದ ಹೇಳದೆ ಕೇಳದೆ ಹೋಗುತ್ತಾರೆ...ಬರುವವರು ಒಂದಿಲ್ಲೊಂದು ಕಾರಣಕ್ಕಾಗಿಯೆ ಬಂದಿರುತ್ತಾರೆ...!
ಮತ್ತೆ ಸಿಗುವಾ ನಾಳೆಗಳಿದ್ದರೆ...!!!


No comments:
Post a Comment