Saturday, June 8, 2019

ಸಾವಿನ ಮನೆಯಲ್ಲಿ...!

ಸಾವಿನ ಮನೆಯಲ್ಲೊಂದು
ಮುಂಗೋಪವಿಲ್ಲದ ಮಗುವಿನ ನಗೆಯಿದೆ

ಸಾವಿನ ಮನೆಯಲ್ಲೊಂದು
ಹಗೆಯನ್ನು ಮರೆತು ಬಂದ ಬಂಧು ಬಳಗವಿದೆ

ಸಾವಿನ ಮನೆಯಲ್ಲೊಂದು
ಸತ್ತ ದೇಹಕ್ಕೆ ವ್ಯಕ್ತಿತ್ವದ ಬಣ್ಣ ಬಳಿದು ಅಂತೆ ಕಂತೆಯ ಕತೆಯನ್ನು ಹರಡಿಸಿ ಹೇಳುವ ಚರ್ಚಾ ಬಳಗವಿದೆ

ಸಾವಿನ ಮನೆಯಲ್ಲೊಂದು
ವಯಸ್ಸನ್ನು ಅಳೆಯುವ, ಅವರಿವರ ಮನೆಯ ಹಿರಿಯರನ್ನು ನೆನೆಯುವ ಪರಿಪಾಠವಿದೆ

ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಕರ್ಪೂರ, ಸುಗಂಧವನ್ನು ಹಚ್ಚಿ ಶೃಂಗಾರಿಸಿ ಕಳುಹಿಸುವ ಯಾತ್ರೆಯದು, ಎಲ್ಲರನ್ನೂ ಎಚ್ಚರಿಸುವ ಯಾತ್ರೆಯದು

ಸಾವಿನ ಮನೆಯಲ್ಲೊಂದು
ಮೌನದ ನಡುವೆ ಸಾಗುವ ಸಂಭಾಷಣೆಯಿದೆ
ಹಸಿವನ್ನೇ ಮರೆಸುವ ದುಃಖದ ಕಾರ್ಮೋಡವಿದೆ
ಮತ್ತೆ ಮತ್ತೆ ಎಚ್ಚರಿಸುತ್ತಿದೆ
ಸಾವಿನ ಮನೆಯಲ್ಲೊಂದು
ಯಾತ್ರೆಯಿದೆ ಎಲ್ಲರನ್ನೂ ಎಚ್ಚರಿಸುವ ಯಾತ್ರೆಯದು..!💯

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...